ಕರ್ನಾಟಕ

karnataka

ETV Bharat / state

ಮುದ್ದೇಬಿಹಾಳದಲ್ಲಿ ಕೋವಿಡ್​ ಗೆದ್ದ ಮಹಿಳೆ: ಆಸ್ಪತ್ರೆಯಲ್ಲಿನ ಸೌಲಭ್ಯದ ಬಗ್ಗೆ ಹೇಳಿದ್ದು ಹೀಗೆ! - women cured by corona infection at muddebihala

ಟ್ರೀಟ್​ಮೆಂಟ್​ ಜೊತೆಗೆ ಉತ್ತಮ ಫುಡ್ ನೀಡುತ್ತಿರುವುದು ರೋಗಿಗಳ ಚೇತರಿಕೆಗೆ ಕಾರಣವಾಗಿದೆ ಎಂದು ಮುದ್ದೇಬಿಹಾಳ ತಾಲೂಕು ವೈದ್ಯಾಧಿಕಾರಿ ಡಾ. ಸತೀಶ್​ ತಿವಾರಿ ತಿಳಿಸಿದ್ದಾರೆ.

women-cured-by-corona-infection-in-muddebihala
ಶಾಂತಾ ಬಿರಾದಾರ

By

Published : May 11, 2021, 4:51 PM IST

ಮುದ್ದೇಬಿಹಾಳ: ಬೆಂಗಳೂರಿನಿಂದ ತಾಲೂಕಿನ ಢವಳಗಿ ಗ್ರಾಮಕ್ಕೆ ವಾಪಸಾಗಿದ್ದ ಮಹಿಳೆ ಶಾಂತಾ ಬಿರಾದಾರ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಅವರಿಗೆ ಮುದ್ದೇಬಿಹಾಳ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಸದ್ಯಕ್ಕೆ ಅವರು ಸೋಂಕಿನಿಂದ ಗುಣಮುಖವಾಗಿ ಹೊರ ಬಂದಿದ್ದು, ಮಾಧ್ಯಮಗಳ ಮುಂದೆ ತಮ್ಮ ಅಭಿಪ್ರಾಯ ಹೇಳಿಕೊಂಡಿದ್ದಾರೆ.

ಕೋವಿಡ್​ ಗೆದ್ದ ಶಾಂತಾ ಬಿರಾದಾರ

ಈ ಬಗ್ಗೆ ಮಾತನಾಡಿದ ಶಾಂತಾ ಬಿರಾದಾರ, ನನಗೆ ಕೊರೊನಾ ಪಾಸಿಟಿವ್​ ಬಂದ ಸಂದರ್ಭದಲ್ಲಿ ಸರಿಯಾಗಿ ಊಟ ಮಾಡಲಾಗುತ್ತಿರಲಿಲ್ಲ. ಬಾಯಿಯಲ್ಲಿ ಕಹಿ ಕಹಿಯಾದ ಅನುಭವವಾಗುತ್ತಿತ್ತು. ಆದರೆ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ನೀಡಿದ್ದಾರೆ. ಅಲ್ಲದೇ, ನಿತ್ಯವೂ ಊಟದಲ್ಲಿ ಮೊಟ್ಟೆ, ಪೌಷ್ಟಿಕ ಕಾಳುಗಳನ್ನು ಸಿಬ್ಬಂದಿ ನೀಡುತ್ತಾ ಬಂದಿದ್ದರಿಂದ ನಾನು ಶೀಘ್ರವೇ ಗುಣಮುಖಳಾಗಿದ್ದೇನೆ ಎಂದು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

ತಾಲೂಕು ವೈದ್ಯಾಧಿಕಾರಿ ಡಾ. ಸತೀಶ್​ ತಿವಾರಿ ಮಾತನಾಡಿ, ಶಾಸಕರಾದ ಎ.ಎಸ್.ಪಾಟೀಲ ನಡಹಳ್ಳಿ ಅವರು ಮುದ್ದೇಬಿಹಾಳದ ತಾಲೂಕು ಆಸ್ಪತ್ರೆಯಲ್ಲಿರುವ ಕೋವಿಡ್ ರೋಗಿಗಳಿಗೆ ಮೊಳಕೆ ಕಾಳು, ಹಣ್ಣು, ಮೊಟ್ಟೆ ಕೊಡುತ್ತಿದ್ದಾರೆ. ಇದು ರೋಗಿಗಳ ಚೇತರಿಕೆಗೆ ಬಹಳಷ್ಟು ಸಹಾಯಕವಾಗಿದೆ. 125 ರೋಗಿಗಳಲ್ಲಿ 80 ಜನ ಗುಣಮುಖವಾಗಿದ್ದಾರೆ. ವೆಂಟಿಲೇಟರ್​ನಲ್ಲಿ 10 ಪೇಶೆಂಟ್​ ಗುಣಮುಖರಾಗಿ ಮರಳಿ ಮನೆಗೆ ಹೋಗಿದ್ದಾರೆ. ಟ್ರೀಟ್​ಮೆಂಟ್​ ಜೊತೆಗೆ ಉತ್ತಮ ಫುಡ್ ನೀಡುತ್ತಿರುವುದು ಕೂಡ ರೋಗಿಗಳ ಚೇತರಿಕೆಗೆ ಕಾರಣವಾಗಿದೆ ಎಂದು ತಿಳಿಸಿದರು.

ಶಾಸಕರು, ಆಸ್ಪತ್ರೆ ಸಿಬ್ಬಂದಿ, ವೈದ್ಯರಿಗೆ ಪೌಷ್ಟಿಕಾಂಶವುಳ್ಳ ಆಹಾರದ ಕಿಟ್ ಕೊಡುತ್ತಿದ್ದಾರೆ. ಇದರಿಂದ ಅನುಕೂಲ ಆಗಿದೆ ಎಂದು ಆಡಳಿತ ವೈದ್ಯಾಧಿಕಾರಿ ಡಾ. ಅನೀಲ್ ಕುಮಾರ್​ ಶೇಗುಣಸಿ ಹೇಳಿದರು.

ಓದಿ:ಪಾಸಿಟಿವಿಟಿ ರೇಟ್​ ಹೆಚ್ಚಾದಂತೆ ಟೆಸ್ಟಿಂಗ್ ಸಂಖ್ಯೆ ಕಡಿಮೆ : ಸೋಂಕಿತರ ಸಂಖ್ಯೆ ಇಳಿಕೆಗೆ ಇದೇನಾ ಕಾರಣ??

For All Latest Updates

TAGGED:

ABOUT THE AUTHOR

...view details