ಕರ್ನಾಟಕ

karnataka

ETV Bharat / state

ಆಲಮಟ್ಟಿ ಹಿನ್ನೀರಿನಲ್ಲಿ ಮಹಿಳೆ ಶವ ಪತ್ತೆ - ವಿಜಯಪುರ ಶವ ಪತ್ತೆ

ಆಲಮಟ್ಟಿ ಜಲಾಶಯದ ಹಿನ್ನೀರಿನಲ್ಲಿ ಮಹಿಳೆಯಬ್ಬರ  ಶವ ಪತ್ತೆಯಾಗದೆ.

womans-body-found-in-alamatti-backwaters
ಆಲಮಟ್ಟಿ ಹಿನ್ನೀರಿನಲ್ಲಿ ಮಹಿಳೆ ಶವ ಪತ್ತೆ

By

Published : Jan 3, 2020, 3:37 PM IST

ವಿಜಯಪುರ: ಆಲಮಟ್ಟಿ ಜಲಾಶಯದ ಹಿನ್ನೀರಿನಲ್ಲಿ ಮಹಿಳೆಯಬ್ಬರ ಶವ ಪತ್ತೆಯಾಗದೆ.

ಸಿಂದಗಿ ನಾಕಾದ ಅಲ್ಲಾಪೂರ ಬಡಾವಣೆಯಲ್ಲಿ ರೇಖಾ ರಾವುತಪ್ಪ ಗುಡಿಮನಿ (33) ಮೃತ ಮಹಿಳೆ ಎಂದು ಪತ್ತೆಯಾಗಿದೆ. ಎರಡು ದಿನಗಳ ಹಿಂದೆ ಹಿನ್ನೀರಿನಲ್ಲಿ ಬಿದ್ದಿರಬಹುದು ಎಂದು ಶಂಕೆ ವ್ಯಕ್ತವಾಗಿದೆ. ಬಸವನ ಬಾಗೇವಾಡಿ ಪಟ್ಟಣಕ್ಕೆ ನೀರು ಸರಬರಾಜು ಮಾಡುವ ಪಂಪ್​ ಹೌಸ್ ಬಳಿ ಶವ ಪತ್ತೆಯಾಗಿದೆ.

ಯಾರಾದರೂ ಕೊಲೆ ಮಾಡಿ ಶವವನ್ನು ಇಲ್ಲಿ ಹಾಕಿರಬಹುದಾ, ಅಥವಾ ಆತ್ಮಹತ್ಯೆ ಮಾಡಿಕೊಂಡಿರಬಹುದಾ ಎನ್ನುವುದು ಸ್ಪಷ್ಟವಾಗಿ ತಿಳಿದುಬಂದಿಲ್ಲ.

ಸ್ಥಳಕ್ಕೆ ಆಲಮಟ್ಟಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಹಿಳೆ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಆಲಮಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆಯ ನಂತರವಷ್ಟೆ ಸಾವಿಗೆ ನಿಖರ ಕಾರಣ ತಿಳಿಯಬೇಕಿದೆ.

ABOUT THE AUTHOR

...view details