ವಿಜಯಪುರ:ಅಪರಿಚಿತರಿಂದ ಯುವತಿಯೊಬ್ಬರು ಕೊಲೆಯಾಗಿರುವ ಘಟನೆ ಜಿಲ್ಲೆಯ ಇಂಡಿ ತಾಲೂಕಿನ ಹಳಗುಣಕಿ ಗ್ರಾಮದಲ್ಲಿ ನಡೆದಿದೆ. ಹಳಗುಣಕಿ ಗ್ರಾಮದ ಹೊರ ಭಾಗದಲ್ಲಿನ ಮನೆಯಲ್ಲಿದ್ದ ಯುವತಿ ಕೊಲೆಯಾಗಿದ್ದು, ಆಕೆಯನ್ನು ಪಲ್ಲವಿ ವಠಾರ್ ಎಂದು (26) ಗುರುತಿಸಲಾಗಿದೆ.
ವಿಜಯಪುರ: ಕತ್ತು ಸೀಳಿ 26ರ ಹರೆಯದ ಯುವತಿಯ ಬರ್ಬರ ಹತ್ಯೆ - ಮಾರಕಾಸ್ತ್ರದಿಂದ ಕತ್ತು ಕೊಯ್ದು ಕೊಲೆ
ವಿಜಯಪುರದಲ್ಲಿ ಪಲ್ಲವಿ ವಠಾರ್ ಎಂಬ ಯುವತಿಯನ್ನು ಅಪರಿಚಿತ ವ್ಯಕ್ತಿಗಳು ಕೊಲೆ ಮಾಡಿದ್ದಾರೆ.
ದುಷ್ಕರ್ಮಿಗಳಿಂದ ಮಹಿಳೆ ಕೊಲೆ
ಮಾರಕಾಸ್ತ್ರದಿಂದ ಪಲ್ಲವಿ ಅವರ ಕತ್ತು ಕೊಯ್ದು ಬರ್ಬರವಾಗಿ ಕೊಲೆ ಮಾಡಲಾಗಿದೆ. ಹಂತಕರು ಯಾರು ಎಂಬುದು ನಿಗೂಢವಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ವಿಜಯಪುರ ಜಿಲ್ಲೆ ಹೊರ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated : Aug 26, 2022, 6:15 PM IST