ವಿಜಯಪುರ: ಅನೈತಿಕ ಸಂಬಂಧ ಹಿನ್ನೆಲೆ ಗಂಡನನ್ನು ಹತ್ಯೆ ಮಾಡಿದ ಆರೋಪದಡಿ ಪತ್ನಿ ಹಾಗೂ ಆಕೆಯ ಪ್ರಿಯಕರ ಸೇರಿ ಮೂವರನ್ನು ವಿಜಯಪುರ ನಗರದ ಸಾಯಿ ಪಾರ್ಕ್ ಬಳಿ ಪೊಲೀಸರು ಬಂಧಿಸಿದ್ದಾರೆ. ರಾಜೇಶ್ವರಿ ಹಳ್ಳಿ, ರವಿ ತಳವಾರ ಹಾಗೂ ಗುರಪ್ಪ ದಳವಾಯಿ ಬಂಧಿತ ಆರೋಪಿಗಳು. ಪ್ರಕಾಶ ಹಳ್ಳಿ ಕೊಲೆಯಾದವರು. ಆತನ ಪತ್ನಿ ರಾಜೇಶ್ವರಿ ಹಾಗೂ ಸಹಚರರು ಸೇರಿ ಕೊಂಡು ಹತ್ಯೆ ಮಾಡಿದ್ದರು ಎನ್ನಲಾಗಿದೆ. ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 302 ಅಡಿ ಜಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ಹಿನ್ನೆಲೆ: ವಿಜಯಪುರ ನಗರದ ಏಕತಾ ಕಾಲೋನಿಯ ನಿವಾಸ ಪ್ರಕಾಶ ಹಳ್ಳಿ ಅವರು ಇದೇ ಜೂ. 8ರಂದು ಅವರ ಮನೆಯ ಬೆಡ್ ರೂಂನಲ್ಲಿ ಅನುಮಾನಾಸ್ಪದವಾಗಿ ಶವವಾಗಿ ಪತ್ತೆಯಾಗಿದ್ದರು. ಸ್ಥಳಕ್ಕೆ ಭೇಟಿ ನೀಡಿದ್ದ ಜಲನಗರ ಪೊಲೀಸರು ಅಸ್ವಾಭಾವಿಕ ಸಾವು ಎಂದು ಪ್ರಕರಣ ದಾಖಲಿಸಿದ್ದರು.