ಮುದ್ದೇಬಿಹಾಳ:ನಾಲತವಾಡ ಪಟ್ಟಣ ಪಂಚಾಯತ್ ಚುನಾವಣೆ ಸಂದರ್ಭದಲ್ಲಿನ ಮಹಿಳಾ ಪಿಎಸ್ಐವೊಬ್ಬರು ವ್ಯಕ್ತಿಯೊಂದಿಗೆ ಮಾತನಾಡಿದ್ದಾರೆ ಎನ್ನಲಾದ ಆಡಿಯೋವೊಂದು ಭಾರಿ ವೈರಲ್ ಆಗಿದೆ. ಪಕ್ಷವೊಂದರ ಅಭ್ಯರ್ಥಿಯ ಪರವಾಗಿ ಮುದ್ದೇಬಿಹಾಳ ಪಿಎಸ್ಐ ರೇಣುಕಾ ಜಕನೂರ ಅವರು ಕೆಲಸ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಆಡಿಯೋದಲ್ಲಿ ಏನಿದೆ: ಆಡಿಯೋದ ಕೊನೆಯಲ್ಲಿ ತಾನು ಮುದ್ದೇಬಿಹಾಳದಿಂದ ಪಿಎಸ್ಐ ಎಂದು ಹೇಳಿಕೊಂಡಿದ್ದು, ವ್ಯಕ್ತಿಯೊಂದಿಗೆ ಮಾತನಾಡಿದ್ದಾರೆ. 'ನಾಲತವಾಡ ಪಟ್ಟಣ ಪಂಚಾಯತ್ನ 6ನೇ ವಾರ್ಡ್ನಲ್ಲಿ ಎಷ್ಟು ವೋಟ್ಗಳಿವೆ? ಯಾವ ಜಾತಿಯವು ಎಷ್ಟು? ಅದರಲ್ಲಿ ನಾಯಕರು ಯಾರಿದ್ದಾರೆ ಎಂಬುದನ್ನು ತಿಳಿದುಕೊಳ್ಳಿ. ಬಳಿಕ ಆ ನಾಯಕನೊಂದಿಗೆ ಪ್ರಚಾರ ನಡೆಸಿ, ಬೇಕಾದ ಎಲ್ಲ ವ್ಯವಸ್ಥೆ ಮಾಡಿಕೊಂಡು ನಿಮ್ಮ ಪರ ಒಲವು ಮೂಡುವಂತೆ ಮಾಡಿಕೊಳ್ಳಿರಿ. ಈ ಎಲ್ಲದರ ಬಗ್ಗೆ ನನಗೆ ಮಾಹಿತಿ ನೀಡಿ. ಒಟ್ಟಿನಲ್ಲಿ ನಿಮ್ಮ ತಾಯಿಯ ಗೆಲುವಿಗೋಸ್ಕರ ಎಲ್ಲ ಪ್ರಯತ್ನ ಮಾಡೋಣ. ಇದು ಯಾರೊಂದಿಗೂ ಹೇಳಿಕೊಳ್ಳುವ ವಿಷಯವಲ್ಲ, ನಮ್ಮ ಸಾಹೇಬರು ಹೀಗೆ ಮಾಡುವಂತೆ ಹೇಳಿದ್ದಾರೆ. ತೊಂದರೆಯಾಗದಂತೆ ನೋಡಿಕೊಳ್ಳುವಂತೆ ಅವರು ನಮಗೆ ತಿಳಿಸಿದ್ದಾರೆ. ಏನಾದರೂ ಸಮಸ್ಯೆ ಇದ್ದರೆ ನನಗೆ ತಿಳಿಸಿ' ಎಂದು ಸೂಚಿಸುತ್ತಾರೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ