ಮುದ್ದೇಬಿಹಾಳ: ತಾಲೂಕಿನ ಬಿದರಕುಂದಿ ಗ್ರಾಮದಲ್ಲಿ ಮಂಗಳವಾರ ಬೆಳಕಿಗೆ ಬಂದ ವಿಷ ಸೇವನೆ ಪ್ರಕರಣದಲ್ಲಿ ಮಹಿಳೆ ಸಾವನ್ನಪ್ಪಿದ್ದಳು. ಆರೋಪಿ ಬಸವರಾಜ ಕಿಲಾರಹಟ್ಟಿಗೆ ಕಠಿಣ ಶಿಕ್ಷೆ ವಿಧಿಸಿ ಆಕೆಯ ಮಕ್ಕಳಿಗೆ ನ್ಯಾಯ ದೊರಕಿಸಿ ಕೊಡುವಂತೆ ಮೃತರ ಸಹೋದರ ವಿನಂತಿಸಿದ್ದಾರೆ.
'ಸಹೋದರಿ ಮೇಲೆ ಬಲಾತ್ಕಾರ ಮಾಡಿ ಕೊಲೆಗೈದವನಿಗೆ ಕಠಿಣ ಶಿಕ್ಷೆ ಕೊಡಿಸಿ' - Muddebihal latest update news
ನನ್ನ ಸಹೋದರಿಗೆ ಬಲಾತ್ಕಾರ ಮಾಡಿ, ವಿಷ ಕುಡಿಸಿ ಕಲ್ಲಿನಿಂದ ಹೊಡೆದು ಸಾಯಿಸಿದ್ದಾನೆ. ಆತನಿಗೆ ಕಠಿಣ ಶಿಕ್ಷೆ ವಿಧಿಸಿಬೇಕೆಂದು ಮೃತರ ಸಹೋದರ ಮನವಿ ಮಾಡಿದ್ದಾರೆ.
ಮುದ್ದೇಬಿಹಾಳ
ಈ ಕುರಿತು ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿರುವ ಮಹಿಳೆಯ ಸಹೋದರ, ಎಮ್ಮೆ ಕೊಡಿಸುವ ನೆಪದಲ್ಲಿ ಪರಿಚಿತನಾಗಿದ್ದ ಬಸವರಾಜ ನನ್ನ ಸಹೋದರಿ ರೇಣುಕಾಳ ಮೇಲೆ ಬಲಾತ್ಕಾರ ಮಾಡಿ ಬಲವಂತವಾಗಿ ವಿಷ ಕುಡಿಸಿ ಕಲ್ಲಿನಿಂದ ಹೊಡೆದು ಸಾಯಿಸಿದ್ದಾನೆ. ಆತನಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಈ ಮೂಲಕ ಆಕೆಯ ಮಕ್ಕಳಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ:ಪ್ರಿಯತಮನ ತೊಡೆ ಮೇಲೆ ನರಳಿ ನರಳಿ ಪ್ರಾಣ ಬಿಟ್ಟ ಪ್ರಿಯತಮೆ..ಆತನ ಸ್ಥಿತಿಯೂ ಗಂಭೀರ
Last Updated : Jul 15, 2021, 6:58 PM IST