ವಿಜಯಪುರ:ಕೊರೊನಾ ಸೋಂಕಿನಿಂದ ಮಹಿಳೆಯೊಬ್ಬಳು ಸಾವನ್ನಪ್ಪಿರುವ ಘಟನೆ ವಿಜಯಪುರದ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.
ವಿಜಯಪುರ: ನಿನ್ನೆ ಸೋಂಕು ದೃಢಪಟ್ಟ ಮಹಿಳೆ ಇಂದು ಸಾವು - ವಿಜಯಪುರದಲ್ಲಿ ಮಹಿಳೆ ಸಾವು
ನಿನ್ನೆ ವಿಜಯಪುರದಲ್ಲಿ ಕೊರೊನಾ ಸೋಂಕಿತ ಮಹಿಳೆ ಇಂದು ಸಾವನಪ್ಪಿದ್ದಾಳೆ.
![ವಿಜಯಪುರ: ನಿನ್ನೆ ಸೋಂಕು ದೃಢಪಟ್ಟ ಮಹಿಳೆ ಇಂದು ಸಾವು vijayapura](https://etvbharatimages.akamaized.net/etvbharat/prod-images/768-512-7064094-thumbnail-3x2-chaii.jpg)
ವಿಜಯಪುರ
62 ವರ್ಷದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ಈಕೆ ರೋಗಿ ನಂ 640 ಆಗಿದ್ದು ರೋಗಿ ನಂ 228ರ ಮೂಲಕ ಈಕೆಗೆ ರೋಗ ತಗುಲಿತ್ತು. ಏ.15ರಂದು ತೀವ್ರ ಜ್ವರದಿಂದ ಬಳಲಿ ಆಸ್ಪತ್ರೆಗೆ ದಾಖಲಾಗಿದ್ದರು. ಇವರ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿತ್ತು.
ನಿನ್ನೆ ಈಕೆಗೆ ಕೊರೊನಾ ಸೋಂಕು ತಗುಲಿರುವುದು ಗೊತ್ತಾಗಿತ್ತು. ಇಂದು ಮಹಿಳೆ ಮೃತಪಟ್ಟಿದ್ದಾರೆ. ಈ ಮೂಲಕ ಕೊರೊನಾ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ಜಿಲ್ಲೆಯಲ್ಲಿ 3ಕ್ಕೆ ಏರಿದೆ. ಒಟ್ಟು 47 ಜನಕ್ಕೆ ಸೋಂಕು ತಗುಲಿದ್ದು, ಅವರಲ್ಲಿ 15 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.