ಕರ್ನಾಟಕ

karnataka

ETV Bharat / state

ಮುದ್ದೇಬಿಹಾಳ ಬಳಿ ಸರಣಿ ಅಪಘಾತ: ಮಹಿಳೆ ಸಾವು, ಇಬ್ಬರ ಸ್ಥಿತಿ ಗಂಭೀರ - ಮುದ್ದೇಬಿಹಾಳ ಕಾರುಗಳ ನಡುವೆ ಡಿಕ್ಕಿ

ಮುದ್ದೇಬಿಹಾಳದ ಹೊಕ್ರಾಣಿ ಕ್ರಾಸ್ ಬಳಿ ನಡೆದ ಸರಣಿ ಅಪಘಾತದಲ್ಲಿ ಮಹಿಳೆ ಸಾವನ್ನಪ್ಪಿ, ಇತರ 6 ಮಂದಿ ಗಾಯಗೊಂಡಿದ್ದಾರೆ.

muddebihala serial accident
ಮುದ್ದೇಬಿಹಾಳ ಸರಣಿ ಅಪಘಾತ

By

Published : Jan 2, 2022, 2:37 PM IST

ಮುದ್ದೇಬಿಹಾಳ(ವಿಜಯಪುರ):ತಾಲೂಕಿನ ಹೊಕ್ರಾಣಿ ಕ್ರಾಸ್ ಬಳಿ ಹುನಗುಂದ-ಮುದ್ದೇಬಿಹಾಳ-ತಾಳಿಕೋಟೆ ರಾಜ್ಯ ಹೆದ್ದಾರಿಯಲ್ಲಿ ನಡೆದ ಸರಣಿ ಅಫಘಾತದಲ್ಲಿ ಮಹಿಳೆ ಸಾವನ್ನಪ್ಪಿ, ಇತರ 6 ಮಂದಿ ಗಾಯಗೊಂಡಿದ್ದರೆ, ಇಬ್ಬರು ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ಶನಿವಾರ ರಾತ್ರಿ ಎರಡು ಕಾರುಗಳ ನಡುವೆ ಅಪಘಾತ ಸಂಭವಿಸಿದ್ದು, ಓರ್ವ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿ, ಕಾರಿನಲ್ಲಿದ್ದ ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿತ್ತು. ಆಗಲೇ ಪೊಲೀಸರು ಸ್ಥಳಕ್ಕೆ ಧಾವಿಸಿ ಎರಡೂ ಕಾರುಗಳನ್ನು ರಸ್ತೆ ಪಕ್ಕದಲ್ಲಿ ನಿಲ್ಲಿಸಿ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದರು. ಏತನ್ಮದ್ಯೆ ನಸುಕಿನ ಜಾವ ಸ್ಕೂಟಿಯೊಂದು ಮಂಜು ಕವಿದ ವಾತಾವರಣದಲ್ಲಿ ರಸ್ತೆ ಪಕ್ಕ ನಿಲ್ಲಿಸಿದ್ದ ಕಾರು ಕಾಣದೆ, ಡಿಕ್ಕಿ ಹೊಡೆದು ಮತ್ತೊಂದು ಅವಘಡ ಸಂಭವಿಸಿದೆ.

ಅಪಘಾತಕ್ಕೀಡಾದ ಕಾರು

ಕಾರುಗಳ ನಡುವಿನ ಅಪಘಾತದಲ್ಲಿ ಮೃತಪಟ್ಟ ಮಹಿಳೆಯನ್ನು ಚಿತ್ರದುರ್ಗ ಜಿಲ್ಲೆ ಹಿರಿಯೂರು ನಿವಾಸಿ ದೀಪಾ ವೆಂಕಟೇಶ ಶಿವಣಗಿ (31) ಎಂದು ಗುರುತಿಸಲಾಗಿದೆ. ಅದೇ ಕಾರಿನಲ್ಲಿದ್ದ ನಾಲ್ವರು ಗಾಯಗೊಂಡಿದ್ದಾರೆ. ಮತ್ತೊಂದು ಕಾರಿನಲ್ಲಿದ್ದ ಏಳು ಜನರು ಪಾರಾಗಿದ್ದಲ್ಲದೆ, ಸ್ಥಳದಿಂದ ಪರಾರಿಯಾಗಿದ್ದಾರೆ.

ಇಬ್ಬರ ಸ್ಥಿತಿ ಗಂಭೀರ:

ಅಪಘಾತಗೊಂಡು ನಿಲ್ಲಿಸಿದ್ದ ಕಾರಿಗೆ ಸ್ಕೂಟಿ ಡಿಕ್ಕಿ ಹೊಡೆದಿದ್ದರಿಂದ ಬೈಕ್ ಸವಾರರಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಶಿನಾನಂದ ಬಿರಾದಾರ (21) ಮತ್ತು ಇಬ್ರಾಹಿಂ ಚಪ್ಪರಬಂದ (30) ಎಂಬುವರು ಗಾಯಗೊಂಡವರು.

ಕಾರಿಗೆ ಡಿಕ್ಕಿ ಹೊಡೆದ ಸ್ಕೂಟಿ

ಎರಡೂ ಪ್ರಕರಣ ಕುರಿತು ತಾಳಿಕೋಟೆ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ನಾಳೆಯಿಂದ ಮಕ್ಕಳಿಗೆ ಕೊರೊನಾ ಲಸಿಕೆ: ಕೋ-ವಿನ್​ ವೆಬ್​ಸೈಟ್​ನಲ್ಲಿ ನೋಂದಣಿ ಪ್ರಕ್ರಿಯೆ ಆರಂಭ

ABOUT THE AUTHOR

...view details