ವಿಜಯಪುರ:ಮೊಬೈಲ್ ಚಾರ್ಜರ್ ವೈರ್ನಿಂದ ಮಗುವಿನ ಕತ್ತು ಹಿಸುಕಿ ಕೊಲೆ ಮಾಡಿದ್ದಮಲತಾಯಿಯನ್ನು ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ತಾಲೂಕಿನ ಮಿಂಚನಾಳ ತಾಂಡಾದಲ್ಲಿ 5 ವರ್ಷದ ಗಂಡು ಮಗುವನ್ನು ಮೊಬೈಲ್ ಚಾರ್ಚರ್ ವೈರ್ ಮೂಲಕ ಕತ್ತು ಹಿಸುಕಿ ಕ್ರೂರಿ ಮಲತಾಯಿ ಕೊಲೆ ಮಾಡಿದ್ದಳು. ಅಲ್ಲದೇ, 3 ವರ್ಷದ ಬಾಲಕನನ್ನು ಸಹ ಹತ್ಯೆ ಮಾಡಲು ಯತ್ನಿಸಿದ್ದಳು. ನಿನ್ನೆಯೇ ವಶಕ್ಕೆ ಪಡೆದಿದ್ದ ಮಹಿಳೆಯ ವಿಚಾರಣೆ ನಡೆಸಿದ ಪೊಲೀಸರು ಇಂದು ಬಂಧನ ಮಾಡಿದ್ದಾರೆ. ಸವಿತಾ ವಿನೋದ್ ಚವ್ಹಾಣ್ ಬಂಧಿತ ಮಲತಾಯಿ.