ಕರ್ನಾಟಕ

karnataka

ETV Bharat / state

ಸಿಂದಗಿ ಪುರಸಭೆ ಮುಖ್ಯಾಧಿಕಾರಿ ಖುರ್ಚಿಗೆ ವಾಮಾಚಾರ - Sindagi municipal councilor post news

ಸಿಂದಗಿ ಪಟ್ಟಣದ ಪುರಸಭೆ ಮುಖ್ಯಾಧಿಕಾರಿ ಕುಳಿತುಕೊಳ್ಳುವ ಖುರ್ಚಿಯ ಬಲಭಾಗದ ಕೆಳಗಡೆ ನಿಂಬೆ ಹಣ್ಣನ್ನು ಅರ್ಧ ಕತ್ತರಿಸಿ, ಕುಂಕುಮ ಹಾಕಿ ಅಲ್ಲಿಟ್ಟು ಹೋಗಲಾಗಿದೆ.‌ ಕಚೇರಿ ಸ್ವಚ್ಛತೆ ಮಾಡುವ ಸಿಬ್ಬಂದಿಯೊಬ್ಬರು ಕಸಗುಡಿಸುವ ವೇಳೆ ಇದನ್ನು ಕಂಡು ಗಾಬರಿಯಾಗಿದ್ದಾರೆ. ಇದರಿಂದ ವಾಮಾಚಾರದ ಶಂಕೆ ವ್ಯಕ್ತವಾಗಿದೆ.

Sindagi municipal councilor post
ಪುರಸಭೆ ಮುಖ್ಯಾಧಿಕಾರಿ ಖುರ್ಚಿಗೆ ವಾಮಾಚಾರ

By

Published : Jan 27, 2021, 10:45 AM IST

Updated : Jan 27, 2021, 12:24 PM IST

ವಿಜಯಪುರ:ಜಿಲ್ಲೆಯ ಸಿಂದಗಿ ಪಟ್ಟಣದ ಪುರಸಭೆ ಮುಖ್ಯಾಧಿಕಾರಿ ಖುರ್ಚಿ ಕೆಳಗೆ ಮಂತ್ರಿಸಿದ ನಿಂಬೆ ಹಣ್ಣು ಇಟ್ಟು ವಾಮಾಚಾರ ಮಾಡಿಸಿರುವ ಶಂಕೆ ವ್ಯಕ್ತವಾಗಿದೆ.

ಮುಖ್ಯಾಧಿಕಾರಿ ಕುಳಿತುಕೊಳ್ಳುವ ಖುರ್ಚಿಯ ಬಲಭಾಗದ ಕೆಳಗಡೆ ನಿಂಬೆ ಹಣ್ಣು ಅರ್ಧ ಕತ್ತರಿಸಿ, ಅದರಲ್ಲಿ ಕುಂಕುಮ ಹಾಕಿ ಅಲ್ಲಿಟ್ಟು ಹೋಗಿದ್ದಾರೆ.‌ ಕಚೇರಿ ಸ್ವಚ್ಛತೆ ಮಾಡುವ ಸಿಬ್ಬಂದಿಯೊಬ್ಬರು ಕಸಗುಡಿಸುವ ವೇಳೆ ಕುಂಕುಮ ತುಂಬಿದ ನಿಂಬೆಹಣ್ಣು ಕಂಡು ಗಾಬರಿಯಾಗಿದ್ದಾರೆ.

ಸಿಂದಗಿ ಪುರಸಭೆ ಮುಖ್ಯಾಧಿಕಾರಿ ಖುರ್ಚಿಗೆ ವಾಮಾಚಾರ

ಕೂಡಲೇ ಮುಖ್ಯಾಧಿಕಾರಿ ಸುರೇಶ ನಾಯಕ ಅವರಿಗೆ ಮಾಹಿತಿ ನೀಡಿದ್ದಾರೆ.‌ ಅವರು ಬಂದು ನೋಡಿದಾಗ ನಿಂಬೆ ಹಣ್ಣು ಕಂಡು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಗಣರಾಜ್ಯೋತ್ಸವಕ್ಕೆ ಬಂದವರೇ ಈ ಕೃತ್ಯ ಎಸೆಗಿರಬಹುದು ಎಂದು ಸಂಶಯ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೇ ಸುರೇಶ ನಾಯಕರೇ ಹೆದರುವ ಅವಶ್ಯಕತೆ ಇಲ್ಲ, ಇದೊಂದು ಮೂಢನಂಬಿಕೆ ಎಂದು ಹೇಳಿ ನಿಂಬೆ ಹಣ್ಣನ್ನು ಕೈಯಿಂದ ತೆಗೆದು ಹೊರಗೆ ಎಸೆದಿದ್ದಾರೆ.

ಓದಿ:ಬೈಕ್​​​ಗಳ ನಡುವೆ ಡಿಕ್ಕಿ: ಜೆಡಿಎಸ್​​ ಶಾಸಕನ ಸಹೋದರ ಸಾವು

ಇದೇ ವೇಳೆ, ಸಿಬ್ಬಂದಿಗೆ ಧೈರ್ಯ ಹೇಳಿರುವ ಮುಖ್ಯಾಧಿಕಾರಿ ಸುರೇಶ ನಾಯಕ, ನಾನು ಅಧಿಕಾರ ವಹಿಸಿಕೊಂಡ ಮೇಲೆ ನನ್ನ ಕೆಲಸಕ್ಕೆ ಕೆಲವರು ಅಡೆತಡೆ ಉಂಟು ಮಾಡುತ್ತಿದ್ದಾರೆ. ಈ ರೀತಿ ನಿಂಬೆ ಹಣ್ಣು ಎಸೆದು ಭಯ ಹುಟ್ಟಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ರು.

Last Updated : Jan 27, 2021, 12:24 PM IST

ABOUT THE AUTHOR

...view details