ಕರ್ನಾಟಕ

karnataka

ETV Bharat / state

ಬಸವನ ಬಾಗೇವಾಡಿಯಲ್ಲಿ ಪತಿ ಕೊಲೆಗೆ ಕುಮ್ಮಕ್ಕು ನೀಡಿದ ಪತ್ನಿ ಸೇರಿ ಮೂವರು ಅಂದರ್​ - illicit relationship

ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮುತ್ತಗಿ ಗ್ರಾಮದಲ್ಲಿ ನಡೆದಿದ್ದ ವ್ಯಕ್ತಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ಯೆಗೀಡಾದ ವ್ಯಕ್ತಿಯ ಪತ್ನಿ ಸೇರಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

wife who involved in husband murder and two others
ಪತಿಯ ಕೊಲೆಗೆ ಕುಮ್ಮಕ್ಕು ನೀಡಿದ ಪತ್ನಿ ಸೇರಿದಂತೆ ಮೂವರ ಬಂಧನ

By

Published : May 15, 2020, 10:44 AM IST

ವಿಜಯಪುರ:ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮುತ್ತಗಿ ಗ್ರಾಮದಲ್ಲಿ ಮೇ. ‌12 ರಂದು ನಡೆದಿದ್ದ ವ್ಯಕ್ತಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ಚಂದ್ರಕಲಾ ರಾಯಗೊಂಡ (27), ಆಕೆಯೊಂದಿಗೆ ಸಂಬಂಧ ಹೊಂದಿದ್ದ ಕುಮಾರ ಪಾಟೀಲ್​ (23) ಮತ್ತು ಕೊಲೆಗೆ ಸಹಕರಿಸಿದ್ದ ಮಂಜು ಕೋಟೆ(17) ಯನ್ನು ಬಂಧಿಸಲಾಗಿದೆ. ಚಂದ್ರಕಲಾಳ ಪತಿ ಶಶಿಕಿರಣ ಶ್ರೀಶೈಲ ರಾಯಗೊಂಡ (36) ಕೊಲೆಗೀಡಾಗಿರುವ ವ್ಯಕ್ತಿ.

ಕುಮಾರ ಪಾಟೀಲ್​ನೊಂದಿಗೆ ಚಂದ್ರಕಲಾ ವಿವಾಹೇತರ ಸಂಬಂಧ ಹೊಂದಿರುವ ವಿಷಯ ಆಕೆ ಪತಿ ಶಶಿಕಿರಣನಿಗೆ ತಿಳಿದಿತ್ತು. ಹೀಗಾಗಿ ಪತಿಯನ್ನು ಹೇಗಾದರೂ ಕೊಲ್ಲುವಂತೆ ಪ್ರಿಯಕರನಿಗೆ ಚಂದ್ರಕಲಾ ಕುಮ್ಮಕ್ಕು ನೀಡಿದ್ದಳು ಎನ್ನಲಾಗ್ತಿದೆ. ಅದರಂತೆ ಕುಮಾರ ಪಾಟೀಲ್​ ಮತ್ತೊಬ್ಬ ಹುಡುಗನ ಸಹಾಯ ಪಡೆದು ಆಕೆಯ ಪತಿಯ ಕತ್ತು ಹಿಸುಕಿ ಕೊಲೆಗೈದಿದ್ದ ಎಂದು ಆರೋಪಿಸಲಾಗಿದೆ.

ಸದ್ಯ ಆರೋಪಿಗಳನ್ನು ಬಂಧಿಸುವಲ್ಲಿ ಬಸವನ ಬಾಗೇವಾಡಿ ಡಿವೈಎಸ್​ಪಿ, ಸಿಪಿಐ ನೇತೃತ್ವದಲ್ಲಿ ಕೂಡಗಿ ಎನ್​ಟಿಪಿಸಿ ಪೊಲೀಸರು ಯಶಸ್ವಿಯಾಗಿದ್ದಾರೆ.

ABOUT THE AUTHOR

...view details