ಕರ್ನಾಟಕ

karnataka

ETV Bharat / state

ಅನೈತಿಕ ಸಂಬಂಧ: ಪತ್ನಿ, ಆಕೆಯ ಮೈದುನನನ್ನು ಕೊಚ್ಚಿ ಕೊಂದ ಪತಿ - ಪತಿಯಿಂದ ಪತ್ನಿ ಕೊಲೆ

ಅನೈತಿಕ ಸಂಬಂಧ ಹಿನ್ನೆಲೆಯಲ್ಲಿ ಪತ್ನಿ ಹಾಗೂ ಆಕೆಯ ಮೈದುನನ್ನು ಕೊಡಲಿಯಿಂದ ಪತಿಯೇ ಕೊಚ್ಚಿ ಕೊಲೆ ಮಾಡಿರುವ ಘಟನೆ ವಿಜಯಪುರದ ಇಂಡಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

wife-and-her-lover-murdered-by-husband
ಕೊಲೆ ಪ್ರಕರಣ

By

Published : Jan 6, 2021, 9:42 AM IST

ವಿಜಯಪುರ:ಅನೈತಿಕ ಸಂಬಂಧ ಹಿನ್ನೆಲೆಯಲ್ಲಿ ಪತ್ನಿ ಹಾಗೂ ಆಕೆಯ ಮೈದುನನ್ನು ಕೊಡಲಿಯಿಂದ ಪತಿಯೇ ಕೊಚ್ಚಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಇಂಡಿ ತಾಲೂಕಿನ ಬಂಥನಾಳ ಗ್ರಾಮದಲ್ಲಿ ತಡರಾತ್ರಿ ನಡೆದಿದೆ.

ಬಂಥನಾಳ ಗ್ರಾಮದ ತೋಟದ ಮನೆಯಲ್ಲಿ ಈ ಘಟನೆ ನಡೆದಿದ್ದು, ರುದ್ರಪ್ಪ ಆಲಮೇಲ (35) ಹಾಗೂ ಈರಮ್ಮ ಆಲಮೇಲ (30) ಕೊಲೆಯಾದವರು. ಈರಮ್ಮಳ ಪತಿ ಲಕ್ಷ್ಮಣ ಆಲಮೇಲ ಇಬ್ಬರನ್ನು ಕೊಚ್ಚಿ ಕೊಲೆ ಮಾಡಿರುವ ಆರೋಪಿಯಾಗಿದ್ದಾನೆ.

ಈರಮ್ಮ ಹಾಗೂ ಆಕೆಯ ಮೈದುನ ರುದ್ರಪ್ಪ ಜೊತೆಗಿದ್ದಾಗಲೇ ನೋಡಿದ ಲಕ್ಷ್ಮಣ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಇಂಡಿ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇಂಡಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details