ಕರ್ನಾಟಕ

karnataka

ETV Bharat / state

ಹೆಂಡತಿ ಶೀಲದ ಬಗ್ಗೆ ಶಂಕೆ: ಕತ್ತು ಸೀಳಿ ಕೊಲೆಗೈದ ಪಾಪಿ ಪತಿ - Wife murder by husband

ವಿಜಯಪುರದ ಮುದ್ದೇಬಿಹಾಳ ತಾಲೂಕಿನ ಗುಡ್ನಾಳ ಗ್ರಾಮದಲ್ಲಿ ಗಂಡನೇ ಪತ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.

Wife murder by husband
ಗಂಡನಿಂದಲೇ ಹೆಂಡತಿ ಕೊಲೆ

By

Published : Mar 6, 2021, 7:03 PM IST

ಮುದ್ದೇಬಿಹಾಳ/ ವಿಜಯಪುರ: ಗಂಡನೇ ಹೆಂಡತಿಯ ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಸಮೀಪದ ಗುಡ್ನಾಳ ಗ್ರಾಮದಲ್ಲಿ ನಡೆದಿದೆ.

ಬಸಮ್ಮ ಕಲ್ಲಪ್ಪ ಕುಂಬಾರ (50) ಕೊಲೆಯಾದ ದುರ್ದೈವಿ. ಈಕೆಯ ಗಂಡ ಕಲ್ಲಪ್ಪ ಬಸಪ್ಪ ಕುಂಬಾರ ಎಂಬಾತ ಕೊಡಲಿಯಿಂದ ಹೆಂಡತಿಯ ಕತ್ತು ಸೀಳಿ ಹತ್ಯೆ ಮಾಡಿದ್ದಾನೆ. ನಿತ್ಯವೂ ಕುಡಿದು ಬಂದು ಹೆಂಡತಿಯೊಡನೆ ಜಗಳವಾಡುತ್ತಿದ್ದ ಕಲ್ಲಪ್ಪ ಇಂದು ಸಹ ಕುಡಿದು ಮನೆಗೆ ಬಂದು ಜಗಳವಾಡಿದ್ದಾನೆ ಎನ್ನಲಾಗಿದೆ.

ಹೆಂಡತಿಯ ನಡತೆಯ ಬಗ್ಗೆ ಸಂಶಯಗೊಂಡು ಮನೆಯಲ್ಲಿಯೇ ಆಕೆಯನ್ನು ಕೊಚ್ಚಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿ ಕಲ್ಲಪ್ಪ ಕುಂಬಾರನನ್ನು ವಶಕ್ಕೆ ಪಡೆಯಲಾಗಿದ್ದು, ತಾಳಿಕೋಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details