ಮುದ್ದೇಬಿಹಾಳ :ತಾಳಿಕೋಟಿ, ಮುದ್ದೇಬಿಹಾಳ ಹಾಗೂ ನಾಲತವಾಡದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಡಿಸಿಎಂ ಹಾಗೂ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಅವರು ಇಂದು ಮುದ್ದೇಬಿಹಾಳ ಮತಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದಾರೆ. ಅವರ ಸ್ವಾಗತಕ್ಕೆ ಮುದ್ದೇಬಿಹಾಳ ಪಟ್ಟಣ ಸಜ್ಜುಗೊಂಡಿದೆ.
ಡಿಸಿಎಂ ಸವದಿ ಸ್ವಾಗತಕ್ಕೆ ಮುದ್ದೇಬಿಹಾಳ ಸಜ್ಜು.. - DCM Laxman Savadi
ಪಟ್ಟಣದ ಹುಡ್ಕೋ ಕಾಲೋನಿಯಲ್ಲಿನ ಉದ್ಯಾನವನದಲ್ಲಿ ಸಾರ್ವಜನಿಕ ಸಮಾರಂಭ ನಡೆಯಲಿದೆ. ಸಂತ ಕನಕದಾಸ ಶಾಲೆಗೆ ಹೋಗುವ ರಸ್ತೆ, ಎಸ್ಬಿಐ ಬ್ಯಾಂಕ್ಗೆ ಹೋಗುವ ರಸ್ತೆ ಹಾಗೂ ಹುಡ್ಕೋಗೆ ಹೋಗುವ ರಸ್ತೆಗಳನ್ನು ಅಲಂಕರಿಸಲಾಗಿದೆ..
ಪಟ್ಟಣದಲ್ಲಿ ಸಿಎಂ ವಿವೇಚನಾ ಕೋಟಾದಡಿ ಅಂದಾಜು 10 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಡಿಸಿಎಂ ಸವದಿ ಹಾಗೂ ಕರ್ನಾಟಕ ಆಹಾರ ಮತ್ತು ನಾಗರಿಕ ಪೂರೈಕೆ ನಿಗಮದ ಅಧ್ಯಕ್ಷರು, ಶಾಸಕ ಎ ಎಸ್ ಪಾಟೀಲ ನಡಹಳ್ಳಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ.
ಪಟ್ಟಣದ ಹುಡ್ಕೋ ಕಾಲೋನಿಯಲ್ಲಿನ ಉದ್ಯಾನವನದಲ್ಲಿ ಸಾರ್ವಜನಿಕ ಸಮಾರಂಭ ನಡೆಯಲಿದೆ. ಸಂತ ಕನಕದಾಸ ಶಾಲೆಗೆ ಹೋಗುವ ರಸ್ತೆ, ಎಸ್ಬಿಐ ಬ್ಯಾಂಕ್ಗೆ ಹೋಗುವ ರಸ್ತೆ ಹಾಗೂ ಹುಡ್ಕೋಗೆ ಹೋಗುವ ರಸ್ತೆಗಳನ್ನು ಅಲಂಕರಿಸಲಾಗಿದೆ. ಅಂಬೇಡ್ಕರ್ ಹಾಗೂ ಬಸವೇಶ್ವರ ವೃತ್ತದಲ್ಲಿ ಸ್ವಾಗತಕ್ಕಾಗಿ ಕಟೌಟ್ಗಳನ್ನು ಹಾಕಿ ತೋರಣಗಳನ್ನು ಕಟ್ಟಲಾಗಿದೆ.