ಕರ್ನಾಟಕ

karnataka

ETV Bharat / state

ಆಲಮಟ್ಟಿಯ 18 ಗೇಟ್‌ಗಳ ಮೂಲಕ ನೀರು ಬಿಡುಗಡೆ; ಹೆಚ್ಚಿದ ಪ್ರವಾಹ ಭೀತಿ - ವಿಜಯಪುರ ಆಲಮಟ್ಟಿ ಅಣೆಕಟ್ಟು ಸುದ್ದಿ

ವಿಜಯಪುರ ಜಿಲ್ಲೆಯ ಆಲಮಟ್ಟಿ ಡ್ಯಾಂನಿಂದ ನೀರು ಬಿಡಲಾಗಿದ್ದು, ನದಿ ದಡದ ನಿವಾಸಿಗಳಿಗೆ ಪ್ರವಾಹ ಭೀತಿ ಎದುರಾಗಿದೆ.

Water release by Almatti Dam, Vijayapura Almatti dam news, Krishna river flood, ಆಲಮಟ್ಟಿ ಅಣೆಕಟ್ಟಿನಿಂದ ನೀರು ಬಿಡುಗಡೆ, ವಿಜಯಪುರ ಆಲಮಟ್ಟಿ ಅಣೆಕಟ್ಟು ಸುದ್ದಿ, ಕೃಷ್ಣಾ ನದಿ ಪ್ರವಾಹ,
ಆಲಮಟ್ಟಿಯ 18 ಗೇಟ್ ಮೂಲಕ ನೀರು ಬಿಡುಗಡೆ

By

Published : Jul 12, 2022, 2:09 PM IST

ವಿಜಯಪುರ: ಮಹಾರಾಷ್ಟ್ರದಲ್ಲಿ ಭಾರಿ ಮಳೆ ಸುರಿಯುತ್ತಿದ್ದು ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿ (ಲಾಲ್ ಬಹದ್ದೂರ ಶಾಸ್ತ್ರಿ) ಜಲಾಶಯ ಭರ್ತಿಗೆ 2 ಮೀಟರ್ ಬಾಕಿಯಿದೆ. ಹೀಗಾಗಿ ಜಲಾಶಯದ 18 ಗೇಟ್‌ಗಳ ಮೂಲಕ ನೀರು ಹೊರಬಿಡಲಾಗುತ್ತಿದೆ.


ಅಣೆಕಟ್ಟೆಯಿಂದ 75,000 ಕ್ಯೂಸೆಕ್ ಹೊರಹರಿವು, 1,04,852 ಒಳಹರಿವಿದ್ದು ಜಲಾಶಯದಲ್ಲಿ 517.28 ಮೀಟರ್ ನೀರು ಸಂಗ್ರಹವಿದೆ. ಜಲಾಶಯದ ಮಟ್ಟ 519.60 ಮೀಟರ್ ಇದೆ. ಒಟ್ಟು ಜಲಾಶಯದ ನೀರಿನ ಸಂಗ್ರಹ ಮಟ್ಟ 123.08 ಟಿಎಂಸಿ ಇದ್ದು, ಇದೀಗ 87.992 ಟಿಎಂಸಿ ಸಂಗ್ರಹವಿದೆ.

ಇದನ್ನೂ ಓದಿ:ರಂಗನತಿಟ್ಟು ಪಕ್ಷಿಧಾಮ ಮುಳುಗಡೆ: ಕೆಆರ್‌ಎಸ್ ಡ್ಯಾಂನಿಂದ 41,000 ಕ್ಯೂಸೆಕ್ ಬಿಡುಗಡೆ

ಇಂದು ಜಿಲ್ಲಾಧಿಕಾರಿ ವಿಜಯ ಮಹಾಂತೇಶ ಹಾಗೂ ಉಪ ವಿಭಾಧಿಕಾರಿಗಳ ತಂಡ ಪ್ರವಾಹಪೀಡಿತ ಯಲಗೂರ ಗ್ರಾಮದ ನದಿಪಾತ್ರದ ಜಾಕವೆಲ್​ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹೊರಹರಿವು ಹೆಚ್ಚಾದರೆ ಮುಂದಿನ ಕ್ರಮ ಕೈಗೊಳ್ಳುವ ಕುರಿತು ಗ್ರಾಮಸ್ಥರ ಜತೆ ಮಾತುಕತೆ ನಡೆಸಿದರು. ಗ್ರಾಮಸ್ಥರು ಎಚ್ಚರಿಕೆ ವಹಿಸುವಂತೆಯೂ ಸೂಚಿಸಿದರು.‌

ಮಳೆಯ ಪ್ರಮಾಣ:ಜಿಲ್ಲೆಯಲ್ಲಿ ನಿನ್ನೆ 2.02 ಮಿ.ಲೀ ಮಳೆಯಾಗಿದೆ.‌ ತಾಳಿಕೋಟೆ ತಾಲೂಕಿನಲ್ಲಿ ಅತಿ ಹೆಚ್ಚು 3.08 ಮಿ.ಮೀಟರ್‌ನಷ್ಟು ಮಳೆಯಾಗಿದೆ. ಅತಿ ಕಡಿಮೆ ಇಂಡಿ ತಾಲೂಕಿನಲ್ಲಿ 0.56 ಮಿ.ಮೀಟರ್ ಮಳೆಯಾದರೆ, ದೇವರಹಿಪ್ಪರಗಿಯಲ್ಲಿ ಮಳೆಯಾದ ವರದಿ ಲಭ್ಯವಾಗಿಲ್ಲ. ತಾಳಿಕೋಟೆ ತಾಲೂಕಿನ ತಮದಡ್ಡಿ ಗ್ರಾಮದಲ್ಲಿ ಮಳೆಯಿಂದ ಒಂದು ಮನೆ ಕುಸಿದು ಬಿದ್ದಿದೆ ಎಂದು ಜಿಲ್ಲಾಡಳಿತ ವರದಿ ನೀಡಿದೆ.

ABOUT THE AUTHOR

...view details