ಕರ್ನಾಟಕ

karnataka

ETV Bharat / state

ಸೊನ್ನ ಬ್ಯಾರೇಜ್‌ನಿಂದ ನೀರು ಬಿಡುಗಡೆ.. ಭೀಮಾ ತೀರದ ಗ್ರಾಮಗಳು ಜಲಾವೃತ - ಕಲಬುರಗಿ ಜಿಲ್ಲೆಯ ಸೊನ್ನ ಬ್ಯಾರೇಜ್

ಸಿಂದಗಿ ತಾಲೂಕಿನ ದೇವಣಗಾಂವದ ಸೇತುವೆ ಬಳಿ 8.60 ಮೀ. ಎತ್ತರದವರೆಗೆ ನೀರು ಹರಿಯುತ್ತಿದೆ. ಸಿಂದಗಿ ತಾಲೂಕಿನ ತಾರಾಪುರ, ತಾವರಖೇಡ, ಬ್ಯಾಡಗಿಹಾಳ, ದೇವಣಗಾಂವ, ಕಡ್ಲೇವಾಡ, ಶಂಬೇವಾಡ, ಕುಮಸಗಿ, ಚಿಕ್ಕಹವಳಗಿ, ಬಗಲೂರ ಗ್ರಾಮಗಳ ಜನರಲ್ಲಿ ಆತಂಕ ಮನೆ ಮಾಡಿದೆ..

Water release from the sonna barrage to bhima river
ಸೊನ್ನ ಬ್ಯಾರೇಜ್ ನಿಂದ ನೀರು ಬಿಡುಗಡೆ

By

Published : Sep 20, 2020, 8:22 PM IST

ವಿಜಯಪುರ:ಜಿಲ್ಲೆಯ ಬ್ಯಾರೇಜ್​ನಿಂದ ಅಪಾರ ಪ್ರಮಾಣದಲ್ಲಿ ನೀರು ಬಿಡುಗಡೆಯಾದ ಹಿನ್ನೆಲೆ ಭೀಮಾ ತೀರದ ನಾನಾ ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ.

ಸೊನ್ನ ಬ್ಯಾರೇಜ್‌ನಿಂದ ನೀರು ಬಿಡುಗಡೆ

ಕಲಬುರಗಿ ಜಿಲ್ಲೆಯ ಸೊನ್ನ ಬ್ಯಾರೇಜ್​ನಿಂದ ಇಂದು ಮಧ್ಯಾಹ್ನ 1 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಪರಿಣಾಮ ಭೀಮಾ ನದಿ ತೀರದ ಸಿಂದಗಿ ತಾಲೂಕಿನ ಹಳ್ಳಿಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ.

ಸಿಂದಗಿ ತಾಲೂಕಿನ ದೇವಣಗಾಂವದ ಸೇತುವೆ ಬಳಿ 8.60 ಮೀ. ಎತ್ತರದವರೆಗೆ ನೀರು ಹರಿಯುತ್ತಿದೆ. ಸಿಂದಗಿ ತಾಲೂಕಿನ ತಾರಾಪುರ, ತಾವರಖೇಡ, ಬ್ಯಾಡಗಿಹಾಳ, ದೇವಣಗಾಂವ, ಕಡ್ಲೇವಾಡ, ಶಂಬೇವಾಡ, ಕುಮಸಗಿ, ಚಿಕ್ಕಹವಳಗಿ, ಬಗಲೂರ ಗ್ರಾಮಗಳ ಜನರಲ್ಲಿ ಆತಂಕ ಮನೆ ಮಾಡಿದೆ.

ಗೋಡೆ ಕುಸಿತ :ದೇವರಹಿಪ್ಪರಗಿಯ ವಾರ್ಡ್ ನಂ.5ರ ನಿವಾಸಿ ಮೊಹ್ಮದ್ ನದಾಫ್ ಎಂಬುವರ ಮನೆಯ ಗೋಡೆ ಕುಸಿದಿದ್ದು, ಅಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ‌.

ABOUT THE AUTHOR

...view details