ಕರ್ನಾಟಕ

karnataka

ETV Bharat / state

ಮುದ್ದೇಬಿಹಾಳದಲ್ಲಿ ಭಾರಿ ಮಳೆಗೆ ಕುಸಿದ ಗೋಡೆ.. ದಂಪತಿಗೆ ಗಾಯ, ಬಚಾವಾದ ಮಕ್ಕಳು - ಸರ್ಕಾರದಿಂದ ಪರಿಹಾರ

ಆಸ್ಪತ್ರೆಯ ಬಿಲ್‌ಗಳನ್ನು ಕಂದಾಯ ಇಲಾಖೆಗೆ ನೀಡಿದರೆ ಅವರಿಗೆ ಸರ್ಕಾರದಿಂದ ಪರಿಹಾರ ದೊರಕಿಸಿ ಕೊಡಲಾಗುತ್ತದೆ. ಅಲ್ಲದೇ ಶೆಡ್ ಹಾಗೂ ಮನೆ ಬಿದ್ದಿರುವುದಕ್ಕೆ ಇಲಾಖೆಯ ನಿಯಮಾವಳಿಗಳನ್ವಯ ಪರಿಹಾರ ನೀಡಲಾಗುತ್ತದೆ ಎಂದು ಕಂದಾಯ ನಿರೀಕ್ಷಕ ಡಿ ಎಸ್ ತಳವಾರ ತಿಳಿಸಿದರು.

wall collapsed due to heavy rain
ಭಾರೀ ಮಳೆಗೆ ಕುಸಿದ ಗೋಡೆ.. ಐವರು ಪ್ರಾಣಾಪಾಯದಿಂದ ಪಾರು!

By

Published : Oct 13, 2022, 11:22 AM IST

Updated : Oct 13, 2022, 12:46 PM IST

ಮುದ್ದೇಬಿಹಾಳ: ತಾಲೂಕಿನಲ್ಲಿ ಎರಡು ದಿನಗಳಿಂದ ಬಿಡದೇ ಮಳೆ ಸುರಿಯುತ್ತಿದ್ದು, ಸಿದ್ದಾಪುರ ಪಿ.ಟಿ. ಗ್ರಾಮದಲ್ಲಿ ಬೆಳಗಿನ ಜಾವ ಮನೆಯ ಗೋಡೆ ಕುಸಿದು ಪಕ್ಕದಲ್ಲಿದ್ದ ಪತ್ರಾಸ್ ಶೆಡ್ ಮೇಲೆ ಬಿದ್ದು ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ದ್ಯಾಮಣ್ಣ ಗೋಡಿಕಾರ ಅವರ ಮನೆ ಗೋಡೆ ಭಾಗಶಃ ಕುಸಿದು ಪತ್ರಾಸ್ ಶೆಡ್ ಮೇಲೆ ಬಿದ್ದ ಪರಿಣಾಮ ಶೆಡ್‌ನಲ್ಲಿದ್ದ ಬಸಪ್ಪ ಗುಡದಿನ್ನಿ ಹಾಗೂ ಅಯ್ಯಮ್ಮ ಗುಡದಿನ್ನಿ ದಂಪತಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಹೆಚ್ಚಿನ ಚಿಕಿತ್ಸೆಗೆ ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇವರ ಮಕ್ಕಳಾದ ಭೀಮವ್ವ, ರೂಪಾ, ಪ್ರಕಾಶ ಅವರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಮುದ್ದೇಬಿಹಾಳ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿದ ಸಂದರ್ಭ ಆಸ್ಪತ್ರೆಗೆ ಭೇಟಿ ನೀಡಿದ ತಹಶಿಲ್ದಾರ್ ಬಿ ಎಸ್ ಕಡಕಭಾವಿ ಅವರು ಗಾಯಾಳುಗಳ ಆರೋಗ್ಯ ವಿಚಾರಿಸಿದರು.

ಭಾರಿ ಮಳೆಗೆ ಕುಸಿದ ಗೋಡೆ.. ಐವರಿಗೆ ಗಾಯ

ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕಂದಾಯ ನಿರೀಕ್ಷಕ ಡಿ ಎಸ್ ತಳವಾರ (ಪವನ್), ಸಿದ್ದಾಪೂರ ಪಿ ಟಿ ಗುಡದಿನ್ನಿ ದಂಪತಿ ಬಾಗಲಕೋಟೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಅವರು ಆಸ್ಪತ್ರೆಯ ಬಿಲ್‌ಗಳನ್ನು ಕಂದಾಯ ಇಲಾಖೆಗೆ ನೀಡಿದರೆ ಅವರಿಗೆ ಸರ್ಕಾರದಿಂದ ಪರಿಹಾರ ದೊರಕಿಸಿಕೊಡಲಾಗುತ್ತದೆ. ಅಲ್ಲದೇ ಶೆಡ್ ಹಾಗೂ ಮನೆ ಬಿದ್ದಿರುವುದಕ್ಕೆ ಇಲಾಖೆಯ ನಿಯಮಾವಳಿಗಳನ್ವಯ ಪರಿಹಾರ ನೀಡಲಾಗುತ್ತದೆ ಎಂದು ತಿಳಿಸಿದರು.

ಕಂದಗನುರ ಯರಝರಿ ಗ್ರಾಮದ ಸೇತುವೆ ಕೊಚ್ಚಿ ಹೋಗಿದೆ. ಮಳೆಯಿಂದಾಗಿ ಬಸರಕೋಡದಿಂದ ಮಾದಿನಾಳ ಸಂಪರ್ಕಿಸುವ ರಸ್ತೆ ಜಲಾವೃತವಾಗಿ ಜನರ ಓಡಾಟಕ್ಕೆ ತೊಂದರೆಯುಂಟಾಯಿತು. ಅಲ್ಲದೇ ಯರಝರಿ ಗ್ರಾಮದ ಹಳ್ಳದೊಳಕ್ಕೆ ಮತ್ತೆ ಮಳೆ ನೀರು ನುಗ್ಗುವ ಭೀತಿ ಜನರನ್ನು ಆವರಿಸಿದೆ. ಹಳ್ಳದ ಅಕ್ಕಪಕ್ಕದಲ್ಲಿದ್ದ ಮುಳ್ಳು ಕಂಟಿಗಳನ್ನು ತೆರವುಗೊಳಿಸುವ ಕಾರ್ಯ ಈವರೆಗೂ ಸಂಬಂಧಿಸಿದ ಇಲಾಖೆಯವರು ಮಾಡಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

ಇದನ್ನೂ ಓದಿ:ರೊಟ್ಟಿ ಮಾಡುವಾಗ ಮನೆಗೋಡೆ ಕುಸಿತ: ಅವಶೇಷಗಳಡಿ ಸಿಲುಕಿದ್ದ ಮಹಿಳೆಯ ರಕ್ಷಣೆ.. ವಿಡಿಯೋ!

Last Updated : Oct 13, 2022, 12:46 PM IST

ABOUT THE AUTHOR

...view details