ಮುದ್ದೇಬಿಹಾಳ:ಗ್ರಾಮ ಪಂಚಾಯತಿ ಚುನಾವಣೆಯ ಮತದಾನ ಪ್ರಕ್ರಿಯೆ ಬಿರುಸಿನಿಂದ ನಡೆದಿದ್ದು, ತಾಲೂಕಿನ ಕೋಳೂರು ಗ್ರಾಪಂ ವ್ಯಾಪ್ತಿಯಲ್ಲಿ ಮತದಾನದ ಗೌಪ್ಯತೆ ಉಲ್ಲಂಘಿಸಿರುವ ಆರೋಪ ಕೇಳಿ ಬಂದಿದೆ.
ತಾಲೂಕಿನ ನೇಬಗೇರಿಯ 94ನೇ ಮತಗಟ್ಟೆಯಲ್ಲಿ ಒಬ್ಬರೇ ಮತ ಚಲಾಯಿಸುವ ಬದಲು ಮೂವರು ಏಕಕಾಲಕ್ಕೆ ನಿಂತು ಒಬ್ಬರು ಮತ ಚಲಾಯಿಸುವುದನ್ನು ಮತ್ತೊಬ್ಬರು ನೋಡಿದ್ದಾರೆ. ಅಲ್ಲದೆ ಅದರಲ್ಲಿ ಓರ್ವ ಮಹಿಳೆ ಇದಕ್ಕೆ ಹಾಕು ಎಂದು ಸೂಚಿದ್ದಾರೆ ಎನ್ನಲಾಗಿದೆ.
ಮತದಾನದ ಗೌಪ್ಯತೆ ಉಲ್ಲಂಘನೆ: ಮುವರಿಂದ ಒಮ್ಮೆಲೇ ಮತದಾನ ಮತದಾನದ ಗೌಪ್ಯತೆ ಉಲ್ಲಂಘನೆ ಮಾಡುತ್ತಿದ್ದರೂ ಮತಗಟ್ಟೆಯ ಚುನಾವಣಾಧಿಕಾರಿಗಳು ಒಬ್ಬೊಬ್ಬರೇ ಮತ ಚಲಾಯಿಸಿ ಎಂದು ಹೇಳಿದರೂ ಅವರ ಮಾತು ಕೇಳದೇ ಮೂವರು ನಿಂತು ಮತ ಚಲಾಯಿಸಿದ್ದಾರಂತೆ. ಈ ಘಟನೆಯಿಂದ ಮತದಾನದ ಗೌಪ್ಯತೆಗೆ ಧಕ್ಕೆ ಉಂಟಾಗಿದೆ ಎಂಬ ಮಾತುಗಳು ಕೇಳಿ ಬಂದಿವೆ. ಮತಗಟ್ಟೆಯಲ್ಲಿದ್ದ ಏಜೆಂಟರೂ ಮತದಾನದ ಗೌಪ್ಯತೆ ಉಲ್ಲಂಘನೆ ಆದರೂ ಮೌನವಾಗಿದ್ದು ಅಚ್ಚರಿಯನ್ನುಂಟು ಮಾಡಿದೆ.
ನೇಬಗೇರಿಯ 95ನೇ ಮತಗಟ್ಟೆಯಲ್ಲಿ ಪಿಆರ್ಒಗಳಿಗೆ ಕೊಟ್ಟಿರುವ ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲವೆಂಬ ಕಾರಣ ನೀಡಿ ಇಬ್ಬರು ಮತದಾರರಿಗೆ ಮತದಾನಕ್ಕೆ ಅವಕಾಶ ನೀಡದೆ ಇರುವ ಸಂಗತಿಯೂ ಬೆಳಕಿಗೆ ಬಂದಿದೆ.