ವಿಜಯಪುರ: ಮೈಸೂರು ಹುಲಿ ಟಿಪ್ಪು ಸುಲ್ತಾನ್ ಒಬ್ಬ ದೇಶ ಭಕ್ತ ಎನ್ನುವುದು ಬಿಜೆಪಿಯವರಿಗೆ ಈಗ ಅರಿವಾಗಿದೆ. ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಸತ್ಯ ಹೇಳಿದ್ದಾರೆ ಎಂದು ಮಾಜಿ ಸಚಿವ ಎಂ.ಬಿ. ಪಾಟೀಲ್ ಪ್ರತಿಕ್ರಿಯಿಸಿದ್ದಾರೆ.
ಟಿಪ್ಪು ಬಗ್ಗೆ ಹೆಚ್. ವಿಶ್ವನಾಥ್ ಸತ್ಯ ಹೇಳಿದ್ದಾರೆ: ಮಾಜಿ ಸಚಿವ ಎಂ.ಬಿ. ಪಾಟೀಲ್ - M.B. Patil
ವಿಧಾನಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಟಿಪ್ಪು ಬಗ್ಗೆ ಸತ್ಯ ಹೇಳಿದ್ದಾರೆ ಎಂದು ಮಾಜಿ ಸಚಿವ ಎಂ.ಬಿ. ಪಾಟೀಲ್ ಪ್ರತಿಕ್ರಿಯಿಸಿದ್ದಾರೆ.
ನಗರದ ಶಿವಾಜಿ ವೃತ್ತದ ಬಳಿಯ ಗಣೇಶ ಮಹಾಮಂಡಳದಿಂದ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ ನಂತರ ವೃಕ್ಷ ಅಭಿಯಾನಕ್ಕೆ ಚಾಲನೆ ನೀಡಿದ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು. ಟಿಪ್ಪು ಸುಲ್ತಾನ್ ಓರ್ವ ದೇಶಭಕ್ತ, ಅವನ ಇತಿಹಾಸವನ್ನು ಪಠ್ಯದಿಂದ ತೆಗೆದಿಲ್ಲ ಎಂದು ವಿಧಾನಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿ, ಈ ಪ್ರಶ್ನೆಯನ್ನು ನೀವು ಬಿಜೆಪಿ ಮುಖಂಡರಿಗೆ ಕೇಳಬೇಕು. ಟಿಪ್ಪು ವಿಚಾರವಾಗಿ ಗೊಂದಲ್ಲಿರುವದು ಬಿಜೆಪಿಯವರು ಮಾತ್ರ ಎಂದರು.
ಹೆಚ್. ವಿಶ್ವನಾಥ್ ಮೂಲಕ ಆ ವಿಷಯ ಬಹಿರಂಗವಾಗಿದೆ. ಅವರು ಸತ್ಯವನ್ನೇ ಹೇಳಿದ್ದಾರೆ ಎನ್ನುವ ಮೂಲಕ ಕಾಂಗ್ರೆಸ್ ಪಕ್ಷದ ರಾಜ್ಯ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿಕೆಗೆ ಎಂ ಬಿ ಪಾಟೀಲ್ ಧ್ವನಿಗೂಡಿಸಿದ್ದಾರೆ.