ವಿಜಯಪುರ: ಜನರು ಮಳೆಗಾಗಿ ಪೂಜೆ, ಹೋಮ-ಹವನ ಹಾಗು ಕತ್ತೆ, ಕಪ್ಪೆಗಳಿಗೆ ಮದುವೆ ಮಾಡುವ ಪದ್ಧತಿ ಹಿಂದಿನಿಂದಲೂ ರೂಢಿಯಲ್ಲಿದೆ. ಆದ್ರೆ, ವಿಜಯಪುರ ಜಿಲ್ಲೆಯ ರೈತರು ಮಳೆಗಾಗಿ ವಿಚಿತ್ರ ಆಚರಣೆ ಕೈಗೊಂಡರು. ಈ ಆಚರಣೆ ಕುರಿತು ಕೇಳಿದ್ರೆ ಆಶ್ಚರ್ಯ ಆಗೋದು ಪಕ್ಕಾ.
ಕಳೆದ 10 ದಿನಗಳಿಂದ ರಾಜ್ಯದ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ವಿಜಯಪುರ ಜಿಲ್ಲೆಯಲ್ಲಿ ಮಾತ್ರ ನಿರೀಕ್ಷಿತ ಮಟ್ಟದಲ್ಲಿ ಮಳೆಯಾಗಿಲ್ಲ. ಹೀಗಾಗಿ, ರೈತಾಪಿ ವರ್ಗ ಕಂಗಾಲಾಗಿದೆ. ಈ ಹಿನ್ನೆಲೆಯಲ್ಲಿ ಮಳೆಗಾಗಿ ಪ್ರಾರ್ಥಿಸಿ ತಾಳಿಕೋಟೆ ತಾಲೂಕಿನ ಕಲಕೇರಿ ಗ್ರಾಮಸ್ಥರು ಗೋರಿಯಲ್ಲಿ ಹೂತಿದ್ದ ಶವದ ಬಾಯಿಗೆ ಪೈಪ್ ಮೂಲಕ ನೀರು ಹಾಕಿದರು.