ಕರ್ನಾಟಕ

karnataka

ETV Bharat / state

ಭೀಮಾ ನದಿಯಲ್ಲಿ ಅಕ್ರಮ‌ ಮರಳುಗಾರಿಕೆ ತಡೆಯುವಂತೆ ಆಗ್ರಹಿಸಿ ಗ್ರಾಮಸ್ಥರ ಪ್ರತಿಭಟನೆ -

ಮಹಾರಾಷ್ಟ್ರದ ಗಡಿ ಭಾಗದ ಭೀಮಾ ನದಿಯಲ್ಲಿ ಅಕ್ರಮ‌ ಮರಳುಗಾರಿಕೆ ನಡೆಯುತ್ತಿದೆ. ಕೂಡಲೇ ಅದನ್ನು ತಡೆಗಟ್ಟಬೇಕೆಂದು ಆಗ್ರಹಿಸಿ ಸುತ್ತಮುತ್ತಲಿನ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.

ಭೀಮಾ ನದಿಯಲ್ಲಿ ಅಕ್ರಮ‌ ಮರಳುಗಾರಿಕೆ ತಡೆಯುವಂತೆ ಆಗ್ರಹಿಸಿ ಗ್ರಾಮಸ್ಥರ ಪ್ರತಿಭಟನೆ

By

Published : Jul 13, 2019, 1:47 PM IST

ವಿಜಯಪುರ:ಮಹಾರಾಷ್ಟ್ರದ ಗಡಿ ಭಾಗದ ಭೀಮಾ ನದಿಯಲ್ಲಿ ಅಕ್ರಮ‌ ಮರಳುಗಾರಿಕೆ ನಡೆಯುತ್ತಿದೆ. ಕೂಡಲೇ ಅದನ್ನು ತಡೆಗಟ್ಟಬೇಕೆಂದು ಆಗ್ರಹಿಸಿ ಸುತ್ತಮುತ್ತಲಿನ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಭೀಮಾ ನದಿಯಲ್ಲಿ ಅಕ್ರಮ‌ ಮರಳುಗಾರಿಕೆ ತಡೆಯುವಂತೆ ಆಗ್ರಹಿಸಿ ಗ್ರಾಮಸ್ಥರ ಪ್ರತಿಭಟನೆ

ಇಂಡಿ ತಾಲೂಕಿನ ಹಿಂಗಣಿ ಬಳಿ ನದಿ ಪ್ರದೇಶದಲ್ಲಿ ಹೋರಾಟ ನಡೆಸಿದ ಹಿಂಗಣಿ‌ ಗ್ರಾಮಸ್ಥರು, ನೆರೆಯ‌ ಮಹಾರಾಷ್ಟ್ರದ ಮರಳುಗಾರಿಕೆ ಮಾಡುವವರು ನಮ್ಮ ಭಾಗದ‌ ಮರಳು ಒಯ್ಯುತ್ತಿದ್ದಾರೆ. ಕರ್ನಾಟಕ-ಮಹಾರಾಷ್ಟ್ರ ರಾಜ್ಯಗಳ ಮಧ್ಯವಿರುವ ಭೀಮಾ ನದಿಯ ಕರ್ನಾಟಕದ ಪಾಲಿನ ಮರಳನ್ನು ಮಹಾರಾಷ್ಟ್ರ ರಾಜ್ಯದವರು ಲೂಟಿ ಮಾಡುತ್ತಿದ್ದಾರೆಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಮರಳುಗಾರಿಕೆ ತಡೆಯಲು ಹಿಂಗಣಿ ಸೇರಿದಂತೆ ಕೆಲ ಗ್ರಾಮಗಳ ಸಾರ್ವಜನಿಕರು ಭಾಗವಹಿಸಿದ್ದ ಕಾರಣ ಕೆಲ ಹೊತ್ತು ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಸದ್ಯ, ಸ್ಥಳಕ್ಕೆ ಝಳಕಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

For All Latest Updates

TAGGED:

ABOUT THE AUTHOR

...view details