ವಿಜಯಪುರ:ಶಿಕ್ಷಕನೊಬ್ಬ ಮಕ್ಕಳಿಗೆ ತಪ್ಪು ತಪ್ಪಾಗಿ ಇಂಗ್ಲಿಷ್ ವರ್ಣಮಾಲೆಯನ್ನು ಹೇಳಿಕೊಟ್ಟು ಪೋಷಕರ ಕೆಂಗಣ್ಣಿಗೆ ಗುರಿಯಾಗಿದ್ದು, ಪ್ರಾಧ್ಯಾಪಕನನ್ನು ಅಮಾನತು ಮಾಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಜಿಲ್ಲೆಯ ಆಲಮೇಲ ತಾಲೂಕಿನ ದುಂದಗಿ ಗ್ರಾಮದಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ದೌಲತ್ ದೇವಕುಳೆ ಎಂಬ ಶಿಕ್ಷಕ ಮಕ್ಕಳಿಗೆ ಇಂಗ್ಲಿಷ್ ವಿಷಯ ಬೋಧಿಸುತ್ತಿದ್ದರು. ಇವರು ಬೋರ್ಡ್ ಮೇಲೆ ಇಂಗ್ಲಿಷ್ ವರ್ಣಮಾಲೆಯನ್ನು ತಪ್ಪು ತಪ್ಪಾಗಿ ಬರೆದು ಅದನ್ನೆ ಮಕ್ಕಳಿಗೆ ಕೇಳಿ ಕೊಟ್ಟಿದ್ದಾರೆ. ಆಗ ಮಕ್ಕಳು ತಪ್ಪು ಎಂದು ಹೇಳಿದರೂ ಗಮನ ಕೊಡದೇ ಪಾಠ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.