ವಿಜಯಪುರ: ಕೊರೊನಾ ಸೋಂಕು ಹರಡುವುದನ್ನು ತಡೆಯುವ ಸಲುವಾಗಿ ಹೇರಲಾಗಿರುವ ಲಾಕ್ಡೌನ್ನಿಂದಾಗಿ ಬಸವನಬಾಗೇವಾಡಿ ತಾಲೂಕಿನ ಅರಷಣಗಿ ಗ್ರಾಮದಲ್ಲಿ ನಡೆಯಬೇಕಾದ ಗ್ರಾಮದೇವತೆ ಜಾತ್ರೆಯನ್ನು ರದ್ದುಗೊಳಿಸಿ ಕೊರೊನಾ ವಾರಿಯರ್ಸ್ಗೆ ಸನ್ಮಾನ ಮಾಡಲಾಯಿತು.
ಗ್ರಾಮ ದೇವತೆ ಜಾತ್ರೆ ರದ್ದುಗೊಳಿಸಿ ಕೊರೊನಾ ವಾರಿಯರ್ಸ್ಗೆ ಸನ್ಮಾನ - corona virus phobia
ಬಸವನಬಾಗೇವಾಡಿ ಅರಷಣಗಿ ಗ್ರಾಮದಲ್ಲಿ ನಡೆಯಬೇಕಾದ ಗ್ರಾಮ ದೇವತೆ ಜಾತ್ರೆ ರದ್ದುಗೊಳಿಸಿ ಕೊರೊನಾ ವಿರುದ್ಧ ಹೋರಾಡುತ್ತಿರುವ ವಾರಿಯರ್ಸ್ಗೆ ಸನ್ಮಾನ ಮಾಡಲಾಯಿತು.
ಕೊರೊನಾ ವಾರಿಯರ್ಸ್ಗೆ ಸನ್ಮಾನ
ಬಸವ ಜಯಂತಿ ಮುಗಿದ ನಂತರ ಐದು ದಿನಗಳ ಕಾಲ ಮಾರುತೇಶ್ವರ ಜಾತ್ರೆ ಪ್ರತಿ ವರ್ಷ ನಡೆಯುತ್ತಿತ್ತು. ಆದರೀಗ ಕೊರೊನಾ ಭೀತಿ ಹಿನ್ನೆಲೆ ನೀರೋಕುಳಿ ಸೇರಿ ವಿವಿಧ ಸಾಂಪ್ರದಾಯಿಕ ಕಾರ್ಯಕ್ರಮ ರದ್ದು ಮಾಡಲಾಗಿದೆ.
ಆರೋಗ್ಯ, ಆಶಾ ಕಾರ್ಯಕರ್ತೆಯರು, ಪೊಲೀಸರು, ಗ್ರಾಮ ಪಂಚಾಯಿತಿ ಸಿಬ್ಬಂದಿಗೆ ಇದೇ ವೇಳೆ ಗ್ರಾಮಸ್ಥರು ಸನ್ಮಾನಿಸಿದರು. ಸನ್ಮಾನಿಸುವ ವೇಳೆ ಸಾಮಾಜಿಕ ಅಂತರ ಕಾಪಾಡಿಕೊಳ್ಳಲಾಗಿತ್ತು.