ವಿಜಯಪುರ:ಮತ ಎಣಿಕೆ ಕೇಂದ್ರಕ್ಕೆ ಆಗಮಿಸಿದ ಬಿಜೆಪಿ ಮುಖಂಡ ವಿಜುಗೌಡ ಪಾಟೀಲ್ ಅವರನ್ನು ಪೊಲೀಸರು ಒಳಗಡೆ ಬಿಡಲು ನಿರಾಕರಿಸಿದ ಘಟನೆ ನಡೆಯಿತು.
ಮತ ಎಣಿಕೆ ಕೇಂದ್ರದ ಒಳಗೆ ಬಿಡದ ಪೊಲೀಸರೊಂದಿಗೆ ವಿಜುಗೌಡ ಪಾಟೀಲ್ ವಾಗ್ವಾದ - undefined
ವಿಜಯಪುರ ಲೋಕಸಭೆ ಮತ ಎಣಿಕೆ ಕೇಂದ್ರದ ಒಳಗೆ ಬಿಡದ ಕಾರಣ ಬಿಜೆಪಿ ಮುಖಂಡ ವಿಜುಗೌಡ ಪಾಟೀಲ್ ಪೊಲೀಸರೊಂದಿಗೆ ಕೆಲ ಹೊತ್ತು ವಾಗ್ವಾದ ನಡೆಸಿದರು. ಆದರೆ ಏನು ಮಾಡಿದರೂ ಪೊಲೀಸರು ಜಗ್ಗದ ಕಾರಣ ಬಂದ ದಾರಿಗೆ ಸುಂಕವಿಲ್ಲ ಎಂದು ಅಲ್ಲಿಂದ ಹೊರಹೋದರು.
ಪೊಲೀಸರು ಒಳಗೆ ಬಿಡಬಹುದು ಎಂದು ವಿಜುಗೌಡ ಕಾರಿನಿಂದ ಇಳಿಯದೇ ಒಳಗೆ ಕುಳಿತಿದ್ದರು. ಆದರೆ ಪೊಲೀಸರು ಯಾರನ್ನೂ ಒಳ ಬಿಡದ ಕಾರಣ ತಾವೇ ಕಾರಿನಿಂದ ಇಳಿದು ಗೇಟ್ ಬಳಿ ಬಂದು ಒಳಗೆ ಬಿಡಲು ಕೇಳಿದರೂ ಪೊಲೀಸರು ಮಾತ್ರ ಕ್ಯಾರೆ ಎನ್ನಲಿಲ್ಲ. ಇದರಿಂದ ಕೆಲಕಾಲ ವಿಜುಗೌಡ ಪೊಲೀಸರರೊಂದಿಗೆ ವಾಗ್ವಾದ ನಡೆಸಿದರು. ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಅವರೊಂದಿಗೆ ವಿಜುಗೌಡ ಆಗಮಿಸಿದ್ದರು. ಆದರೆ ಅವರು ಮುಂದೆ ಹೋದ ತಕ್ಷಣ ಪೊಲೀಸರು ವಿಜುಗೌಡ ಅವರನ್ನು ತಡೆದರು. ಆದರೆ ಪಾಸ್ ಮಾತ್ರ ರಮೇಶ್ ಜಿಗಜಿಣಗಿ ಅವರ ಬಳಿ ಉಳಿದಿದೆ ಅಂತ ಎಷ್ಟು ಹೇಳಿದರೂ ಪೊಲೀಸರು ಕೇಳಲಿಲ್ಲ. ಹೀಗಾಗಿ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಬಿಜೆಪಿ ಮುಖಂಡ ವಿಜುಗೌಡ ವಾಪಸ್ ನಡೆದರು. ಇದಾದ ಕೆಲ ಕ್ಷಣದಲ್ಲಿಯೇ ಮತ ಎಣಿಕೆ ಕೇಂದ್ರದಿಂದ ರಮೇಶ್ ಜಿಗಜಿಣಗಿ ಕೂಡಾ ಹೊರಗಡೆ ಬಂದರು.