ವಿಜಯಪುರ:ಕೊರೊನಾ ಆರ್ಭಟದಿಂದ ಪೊಲೀಸ್ ಇಲಾಖೆ ಸಹ ಭಯದಲ್ಲೇ ಕಾರ್ಯನಿರ್ವಹಿಸುತ್ತಿದೆ. ಈಗಾಗಲೇ ಎರಡು ಬಾರಿ ವಿಜಯಪುರದ ವಾಟರ್ ಟ್ಯಾಂಕ್ ಬಳಿಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಸೀಲ್ ಡೌನ್ ಮಾಡಲಾಗಿದೆ. 7-8 ಪೊಲೀಸ್ ಠಾಣೆಗಳು ಸಹ ಸೀಲ್ ಡೌನ್ ಆಗಿವೆ.
ಹೋಂ ಕ್ವಾರಂಟೈನ್ ಬಳಿಕ ಕೊರೊನಾ ಪರೀಕ್ಷೆಗೆ ಒಳಗಾದ ವಿಜಯಪುರ ಎಸ್ಪಿ - police personnels get Corona
ರಾಜ್ಯದ ಹಲವು ಪೊಲೀಸ್ ಠಾಣೆಗಳು ಕೊರೊನಾದಿಂದಾಗಿ ಸೀಲ್ ಡೌನ್ ಆದರೆ, ನೂರಾರು ಪೊಲೀಸರು ಸಹ ಸೋಂಕಿಗೆ ಒಳಗಾಗಿದ್ದಾರೆ. ಈ ನಡುವೆ ಇಲ್ಲಿನ ಎಸ್ಪಿ ಅನುಪಮ್ ಅಗರ್ವಾಲ್ ಗಂಟಲು ದ್ರವ ಪರೀಕ್ಷೆಗೆ ಒಳಗಾಗಿದ್ದಾರೆ. ಈ ಮೊದಲು ಹೋಂ ಕ್ವಾರಂಟೈನ್ಗೆ ಒಳಗಾಗಿದ್ದ ಎಸ್ಪಿ ಈಗ ಕೊರೊನಾ ಪರೀಕ್ಷೆಗೂ ಒಳಗಾಗಿದ್ದಾರೆ.
![ಹೋಂ ಕ್ವಾರಂಟೈನ್ ಬಳಿಕ ಕೊರೊನಾ ಪರೀಕ್ಷೆಗೆ ಒಳಗಾದ ವಿಜಯಪುರ ಎಸ್ಪಿ Vijaypur SP Done swab test after over come from home qauratine](https://etvbharatimages.akamaized.net/etvbharat/prod-images/768-512-8098084-thumbnail-3x2-vij.jpg)
ಹೋಂ ಕ್ವಾರಂಟೈನ್ ಬಳಿಕ ಗಂಟಲು ದ್ರವ ಪರೀಕ್ಷೆಗೆ ಒಳಗಾದ ವಿಜಯಪುರ ಎಸ್ಪಿ
ಹೋಂ ಕ್ವಾರಂಟೈನ್ ಬಳಿಕ ಗಂಟಲು ದ್ರವ ಪರೀಕ್ಷೆಗೆ ಒಳಗಾದ ವಿಜಯಪುರ ಎಸ್ಪಿ
ಹಲವು ಪೊಲೀಸ್ ಸಿಬ್ಬಂದಿ ಕೊರೊನಾ ಪಾಸಿಟಿವ್ನಿಂದ ಆಸ್ಪತ್ರೆಗೆ ದಾಖಲಾಗಿ ಮರಳಿ ಕರ್ತವ್ಯದಲ್ಲಿದ್ದಾರೆ. ಅಲ್ಲದೆ ಎಸ್ಪಿ ಅನುಪಮ್ ಅಗರವಾಲ್ ಒಂದು ಬಾರಿ ಹೋಂ ಕ್ವಾರಂಟೈನ್ ಸಹ ಆಗಿದ್ದರು. ಇದೀಗ ಗಂಟಲು ದ್ರವ ಪರೀಕ್ಷೆಗೂ ಒಳಗಾಗಿದ್ದಾರೆ.
ಸೋಮವಾರ ಬಾಗಲಕೋಟೆ ರಸ್ತೆಯಲ್ಲಿರುವ ಎಸ್ಪಿ ನಿವಾಸದಲ್ಲಿ ಸ್ವ್ಯಾಬ್ ಟೆಸ್ಟ್ಗೆ ಒಳಗಾಗಿದ್ದಾರೆ. ಎಸ್ಪಿ ಅನುಪಮ್ ಅಗರ್ವಾಲ್ ಅವರ ನಿವಾಸದ ಉದ್ಯಾನವನದಲ್ಲಿ ಇಬ್ಬರು ಆರೋಗ್ಯ ಸಿಬ್ಬಂದಿ ಪಿಪಿಇ ಕಿಟ್ ಧರಿಸಿ ಎಸ್ಪಿಯವರ ಗಂಟಲು ದ್ರವ ಪಡೆದುಕೊಂಡರು.