ಕರ್ನಾಟಕ

karnataka

ಪೊಲೀಸರಿಂದ ಬಸವರಾಜ್​​ ಪಾಟೀಲ ಕುಟುಂಬಕ್ಕೆ ಯಾವುದೇ ತೊಂದರೆಯಾಗಿಲ್ಲ: ಎಸ್​​ಪಿ ಸ್ಪಷ್ಟನೆ

By

Published : Nov 8, 2020, 10:17 AM IST

ವಿಜಯಪುರದ ಪೊಲೀಸ್ ಕಾನ್ಸ್​​ಟೇಬಲ್​ ಬಸವರಾಜ್ ಪಾಟೀಲ​ ತನ್ನ ತಂದೆ ಸಾವಿಗೆ ಸಿಂದಗಿ ಪೊಲೀಸರ ಕಿರುಕುಳವೇ ಕಾರಣ ಎಂದು ಆರೋಪಿಸಿ ವಿಡಿಯೋ ಹರಿಬಿಟ್ಟಿದ್ದರು. ಈ ಕುರಿತು ಸ್ಪಷ್ಟನೆ ನೀಡಿರುವ ಎಸ್​ಪಿ ಅನುಪಮ್​ ಅಗರ್​ವಾಲ್​ ಅವರು, ಬಸವರಾಜ್​ ತಂದೆ ಸಾವಿಗೂ ಸಿಂದಗಿ ಪೊಲೀಸರಿಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

vijaypur sp anupam agarval pressmeet
ಎಸ್​​ಪಿ ಸ್ಪಷ್ಟನೆ

ವಿಜಯಪುರ:ಸಿಂದಗಿ ಪೊಲೀಸರು ನಡೆಸಿದ ಹಲ್ಲೆ ನನ್ನ ತಂದೆ ಸಾವಿಗೆ ಕಾರಣವಾಗಿದೆ‌ ಎಂದು ಕಾನ್ಸ್‌ಟೇಬಲ್ ಬಸವರಾಜ ಪಾಟೀಲ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್​ಪಿ ಅನುಪಮ್ ಅಗರವಾಲ್ ಸ್ಪಷ್ಟನೆ ನೀಡಿದ್ದಾರೆ.

ಆರೋಪಕ್ಕೆ ಸಂಬಂಧಿಸಿದಂತೆ ಎಸ್​​ಪಿ ಸ್ಪಷ್ಟನೆ
ಪೊಲೀಸರ ಕಿರುಕುಳದಿಂದ ಬಸವರಾಜ್ ಪಾಟೀಲ ತಂದೆ ಹಣಮಂತರಾಯ್ ಪಾಟೀಲ ಸಾವನ್ನಪ್ಪಿಲ್ಲ, ಬದಲಿಗೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ‌. ಅವರ ತಂದೆ ಸಾವಿನ ಕುರಿತು ಯಾವುದೇ ಪ್ರಕರಣ ದಾಖಲಾಗಿಲ್ಲ. ಕಾನ್ಸ್‌ಟೇಬಲ್ ಬಸವರಾಜ ಪಾಟೀಲ ಕುಟುಂಬದಲ್ಲಿ ಆಸ್ತಿ ವಿವಾದ ಹಲವು ವರ್ಷಗಳಿಂದ ನ್ಯಾಯಾಲಯದಲ್ಲಿದೆ. ಕಳೆದ 13 ವರ್ಷಗಳಿಂದ ಆಸ್ತಿ ಹಂಚಿಕೆ ಕುರಿತು ಜಗಳವಿತ್ತು. ಬಸವರಾಜ್​ 'ನನ್ನ ತಂದೆಗೆ ಸಿಂದಗಿ ಪೊಲೀಸರು ದೌರ್ಜನ್ಯ,‌ಕಿರುಕುಳ ನೀಡಿದ್ದಾರೆ' ಎಂದು ಸಾಮಾಜಿಕ ಜಾಲತಾಣದಲ್ಲಿ ಆರೋಪ ಮಾಡಿರೋದು ಸತ್ಯಕ್ಕೆ ದೂರವಾಗಿದೆ‌ ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್ ತಿಳಿಸಿದರು. ಸಿಬ್ಬಂದಿ ವಿಚಾರಣೆಗೆ ಬಸವರಾಜ ಪಾಟೀಲ ಮನೆಗೆ ಹೋದಾಗ ಸಿಬ್ಬಂದಿಯ ಮೇಲೆಯೇ ಹಲ್ಲೆಗೆ ಯತ್ನಿಸಿದ್ದಾರೆ. ಪೊಲೀಸರ ಜೊತೆಗೆ ಅನುಚಿತವಾಗಿ ವರ್ತಿಸಿದ್ದಾರೆ. ಈ ಕುರಿತು ನಾವು ಪ್ರಕರಣ ದಾಖಲಿಸಿ, ಬೆಂಗಳೂರು ಪೊಲೀಸ್​ ಕಮಿಷನರ್​​ಗೆ ವರದಿ ಸಲ್ಲಿಸುತ್ತೇವೆ ಎಂದರು.
ಈ ಹಿಂದೆ 2016‌ ರಲ್ಲಿ ಕಾನ್ಸ್‌ಟೇಬಲ್ ಬಸವರಾಜ್ ಪಾಟೀಲ ಪೊಲೀಸರ ಮೇಲೆ ಇಲ್ಲಸಲ್ಲದ ಆರೋಪ ಮಾಡಿ ವಿಡಿಯೋ ಹರಿಬಿಟ್ಟಿದ್ದರು. ಎಲ್ಲವೂ ಸತ್ಯಕ್ಕೆ ದೂರವಾಗಿದ್ದು, ಇದರಲ್ಲಿ ನಮ್ಮ‌ ಪೊಲೀಸರ ಕೈವಾಡವಿಲ್ಲ. ಆತನ ವಿರುದ್ಧ ಕ್ರಮಕ್ಕೆ‌ ಮುಂದಾಗಿದ್ದೇವೆ ಎಂದು ಎಸ್​ಪಿ ಅನುಪಮ್ ಅಗರವಾಲ್ ವಿವರಿಸಿದರು.

For All Latest Updates

ABOUT THE AUTHOR

...view details