ವಿಜಯಪುರ: ಕ್ಷುಲ್ಲಕ ಕಾರಣಕ್ಕೆ ದಾಯಾದಿಗಳ ಮಧ್ಯೆ ಮಾರಾಮಾರಿ ನಡೆದಿರುವ ಘಟನೆ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಕಲಗುರ್ಕಿ ಗ್ರಾಮದಲ್ಲಿ ಕಳೆದ ರಾತ್ರಿ ನಡೆದಿದೆ.
ವಿಜಯಪುರ: ಕ್ಷುಲ್ಲಕ ಕಾರಣಕ್ಕೆ ದಾಯಾದಿಗಳ ಮಧ್ಯೆ ಮಾರಾಮಾರಿ - ವಿಜಯಪುರ
ಬಾವಿಯ ನೀರು ಬಳಸಬಾರದು ಎಂದು ಹೇಳಿದ್ದಕ್ಕೆ ಮಹಾದೇವಪ್ಪ ಪಾರಗೊಂಡ ಮೇಲೆ ನಾಲ್ವರು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎನ್ನಲಾಗ್ತಿದೆ.
ವಿಜಯಪುರ: ಕ್ಷುಲ್ಲಕ ಕಾರಣಕ್ಕೆ ದಾಯಾದಿಗಳ ಮಧ್ಯೆ ಮಾರಾಮಾರಿ
ಮಹಾದೇವಪ್ಪ ಪಾರಗೊಂಡ ಹಲ್ಲೆಗೊಳಗಾದವರು. ಬಾವಿಯ ನೀರು ಬಳಸಬಾರದು ಎಂದು ಹೇಳಿದ್ದಕ್ಕೆ ಮಹಾದೇವಪ್ಪ ಪಾರಗೊಂಡ ಮೇಲೆ ನಾಲ್ವರು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಸದ್ಯ ಗಾಯಗೊಂಡಿರುವ ಮಹಾದೇವಪ್ಪ ಪಾರಗೊಂಡ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗಂಗಾಧರ ಪಾರಗೊಂಡ, ಮಾಮಲ್ಲಪ್ಪ ಪಾರಗೊಂಡ, ಸಚಿನ ನಾಗರಾಳ, ವೀರೇಶ ಪಾರಗೊಂಡ ಹಲ್ಲೆ ಮಾಡಿರುವ ಆರೋಪಿಗಳು. ಸದ್ಯ ಗಾಯಾಳು ನೀಡಿದ ದೂರಿನ ಮೇಲೆ ನಾಲ್ವರ ವಿರುದ್ಧ ಮನಗೂಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.