ಕರ್ನಾಟಕ

karnataka

ETV Bharat / state

ಮಾರುಕಟ್ಟೆ ಅಭಿವೃದ್ಧಿ ಕುಂಠಿತಕ್ಕೆ ಪಾಲಿಕೆ ನಿರ್ಲಕ್ಷ್ಯವೇ ಕಾರಣ: ವ್ಯಾಪಾರಸ್ಥರ ಆರೋಪ

ಪ್ರತಿದಿನ ಸಾವಿರಾರು ಜನ ಈ ವ್ಯಾಪಾರ ಕೇಂದ್ರಕ್ಕೆ ಭೇಟಿ ನೀಡ್ತಾರೆ. ಆದ್ರೆ ಅಧಿಕಾರಿಗಳು ಸ್ವಚ್ಛತಾ ಕ್ರಮಕ್ಕೆ ಮುಂದಾಗದೆ ಇರೋದಕ್ಕೆ ಸಾಂಕ್ರಾಮಿಕ ಕಾಯಿಲೆಗಳ ಭೀತಿ ಎದುರಾಗಿದೆ ಅಂತಾ ವ್ಯಾಪಾರಿಗಳು ಪಾಲಿಕೆ ವಿರುದ್ಧ ಆರೋಪಗಳ ಸುರಿಮಳೆ ‌ಸುರಿಸುತ್ತಿದ್ದಾರೆ.

By

Published : Oct 9, 2020, 12:57 PM IST

Lal Bahadur Shastri Market
ಮಾರುಕಟ್ಟೆ

ವಿಜಯನಗರ: ಇದು ನಗರದ ದೊಡ್ಡ ಮಾರುಕಟ್ಟೆಯಾಗಿದ್ದರೂ ಪಾಲಿಕೆಯ ನಿರ್ಲಕ್ಷ್ಯದಿಂದಾಗಿ ಅಭಿವೃದ್ಧಿಯನ್ನೇ ಕಂಡಿಲ್ಲ. ಅಲ್ಲದೇ, ಇತ್ತ ವ್ಯಾಪಾರಕ್ಕೆ ಬರುವ ಜನರಿಗೆ ಸಾಂಕ್ರಾಮಿಕ ಕಾಯಿಲೆ ಹರಡುವ ಭೀತಿ ಶುರುವಾಗಿದೆ ಎಂಬುದು ಇಲ್ಲಿನ ವ್ಯಾಪಾರಸ್ಥರ ಆರೋಪವಾಗಿದೆ.

ಮಾರುಕಟ್ಟೆಯ ಅಭಿವೃದ್ಧಿ ಕುಂಠಿತ ಆರೋಪ

ನಗರದ ಹೃದಯ ಭಾಗದಲ್ಲಿರುವ ಲಾಲ್ ಬಹುದ್ದೂರ್ ಶಾಸ್ತ್ರಿ ಮಾರುಕಟ್ಟೆಯಲ್ಲಿ ಕಳೆದ ಹಲವು ತಿಂಗಳಿಂದ‌ ಎಲ್‌ಬಿಎಸ್ ಮಾರುಕಟ್ಟೆ ಕಸ ವಿಲೇವಾರಿ, ಚರಂಡಿ ಸಮಸ್ಯೆ, ವಿದ್ಯುತ್ ವೈರಿಂಗ್ ರಿಪೇರಿ ಸೇರಿದಂತೆ ಮೂಲ ಸೌಕರ್ಯಗಳನ್ನ ಅಧಿಕಾರಿಗಳು ಒದಗಿಸಿಲ್ಲ. ಹೀಗಾಗಿ ವ್ಯಾಪಾರಕ್ಕೆ ದೊಡ್ದ ಮಟ್ಟದಲ್ಲಿ ಹೊಡೆತ ಬೀಳ್ತಿದೆ ಅಂತಾ ವ್ಯಾಪಾರಸ್ಥರು ಆರೋಪ ಮಾಡ್ತಿದ್ದಾರೆ. ಇತ್ತ ಸ್ವಲ್ಪ, ಮಳೆಯಾದ್ರೆ ಮಾರುಕಟ್ಟೆ ಎಲ್ಲ ಮಳಿಗೆಗಳು ಸೋರುತ್ತಿದ್ದು ಅಂಗಡಿ ಮುಂಗಟ್ಟುಗಳು ಸರಕುಗಳು ಕೆಟ್ಟು ಹೋಗ್ತಿವೆ ಅಂತಾ ವ್ಯಾಪಾರಿಗಳು ಮಹಾನಗರ ಪಾಲಿಕೆ ವಿರುದ್ಧ ಆಕ್ರೋಶ ಹೊರ ಹಾಕ್ತಿದ್ದಾರೆ.

ವ್ಯಾಪಾರಸ್ಥರ ಮನವಿ

ಪ್ರತಿದಿನ ಸಾವಿರಾರು ಜನ ಈ ವ್ಯಾಪಾರ ಕೇಂದ್ರಕ್ಕೆ ಭೇಟಿ ನೀಡ್ತಾರೆ. ಆದ್ರೆ ಅಧಿಕಾರಿಗಳು ಸ್ವಚ್ಛತಾ ಕ್ರಮಕ್ಕೆ ಮುಂದಾಗದೆ ಇರೋದಕ್ಕೆ ಸಾಂಕ್ರಾಮಿಕ ಕಾಯಿಲೆಗಳ ಭೀತಿ ಎದುರಾಗುತ್ತಿದೆ‌ ಅಂತಾ ಪಾಲಿಕೆ ವಿರುದ್ಧ ಕಿಡಿಕಾರಿದ್ದಾರೆ.

ಮಾರುಕಟ್ಟೆಯಲ್ಲಿ ಮೇಲ್ಛಾವಣಿ ದುರಸ್ತಿ, ಟೈಲ್ಸ್ ಅಳವಡಿಕೆ, ಮಾರುಕಟ್ಟೆ ವೈರಿಂಗ್ ಮಾಡುತ್ತೇವೆ ಎಂದು ಅಧಿಕಾರಿಗಳು, ವ್ಯಾಪಾರಿಗಳಿಗೆ ಭರವಸೆಯ ಮಾತುಗಳನ್ನೇ ಹೇಳಿಕೊಂಡು ಬಂದಿದ್ದಾರೆ. ಅಲ್ಲದೇ, 450 ಮಳಿಗೆ ಹೊಂದಿರುವ ಮಾರುಕಟ್ಟೆಯಲ್ಲಿ ಸರಿಯಾಗಿ ಸ್ವಚ್ಛತಾ ಕ್ರಮಕ್ಕೆ ಮುಂದಾಗದಿರೋದಕ್ಕೆ ಗ್ರಾಹಕರ ಕೊರತೆ ಕಾಣ್ತಿದೆ ಅಂತಾ ವ್ಯಾಪಾರಿಗಳು ಅಳಲು ತೋಡಿಕೊಳ್ಳುತ್ತಿದ್ದಾರೆ.

ವ್ಯಾಪಾರಸ್ಥರ ಮನವಿ

ವ್ಯಾಪಾರಸ್ಥರು ಹೇಳುವ ಪ್ರಕಾರ, ಕಳೆದ ವರ್ಷ ಎಲ್‌ಬಿಎಸ್ ಮಾರುಕಟ್ಟೆ ಅಭಿವೃದ್ಧಿಗೆ 1 ಕೋಟಿ ಹಣ ಸರ್ಕಾರದಿಂದ ಬಿಡುಗಡೆಯಾಗಿದೆಯಂತೆ. ಇನ್ನೊಂದೆಡೆ ಮಾರುಕಟ್ಟೆಗೆ ಮೂಲ ಸೌಕರ್ಯ ಒದಗಿಸುವಂತೆ ಪಾಲಿಕೆಗೆ ಮನವಿ ಮಾಡಿದ್ರೂ ಕ್ಯಾರೆ ಎನ್ನುತ್ತಿಲ್ಲವಂತೆ.

ಪ್ರತಿ ವರ್ಷವೂ ಮಳಿಗೆ ರಿನಿವಲ್​​ ಮಾಡಲು ತಲಾ ಒಂದು ಮಳಿಗೆಗೆ 1200 ರೂ. ಪಾವತಿಸುತ್ತಿದ್ದು, ಜೊತೆಗೆ ಪ್ರತಿ ತಿಂಗಳು ಬಾಡಿಗೆ, ಕಸ ವಿಲೇವಾರಿ ಬಾಡಿಗೆ ಕಟ್ಟಲಾಗುತ್ತಿದೆ. ಆದರೂ, ಮಾರುಕಟ್ಟೆಯ ಅಭಿವೃದ್ಧಿ ಮರೀಚಿಕೆ ಆಗಿದೆ. ಕಟ್ಟಡ ಕೂಡ ಅಲ್ಲಲ್ಲಿ ಬಿರುಕು ಬಿಡುತ್ತಿರುವುದಕ್ಕೆ ವ್ಯಾಪಾರಸ್ಥರು ಕೂಡ ಆತಂಕದಲ್ಲಿ ಕಾಲ ಕಳೆಯುವಂತಾಗಿದೆ. ಇನ್ನಾದರೂ ಅಧಿಕಾರಿಗಳು ಅಭಿವೃದ್ಧಿ ಕೆಲಸ ಮಾಡಲಿ ಎಂದು ವ್ಯಾಪಾರಸ್ಥರು ಆಗ್ರಹಿಸುತ್ತಿದ್ದಾರೆ.

ABOUT THE AUTHOR

...view details