ಮುದ್ದೇಬಿಹಾಳ:ತಾಳಿಕೋಟೆ ತಾಲೂಕಿನ ಗುಂಡಕನಾಳ ಗ್ರಾಮದಲ್ಲಿರುವ ಬೃಹನ್ಮಠದಲ್ಲಿ ವಿಜಯಪುರ ಜಿಲ್ಲಾ ಮಠಾಧೀಶರ ಒಕ್ಕೂಟದ ಸಭೆ ಜರುಗಿತು. ಶ್ರೀ ಷಟಸ್ಥಲ ಬ್ರಹ್ಮ ಗುರುಲಿಂಗ ಶಿವಾಚಾರ್ಯರು ಈ ಸಭೆಯ ನೇತೃತ್ವ ವಹಿಸಿದ್ದರು.
ಈ ವೇಳೆ ಮಾತನಾಡಿದ ಗುಂಡಕನಾಳ ಶ್ರೀ, ಕೋವಿಡ್ ಸಮಯದಲ್ಲಿ ಪ್ರಾಣ ಪಣಕ್ಕಿಟ್ಟು ಹೋರಾಡಿದ ವಾರಿಯರ್ಸ್ಗೆ ಅಭಿನಂದನೆ ತಿಳಿಸಿದರು. ಮೂರು ತಿಂಗಳಿಗೊಮ್ಮೆ ಜರುಗುವ ವಿಜಯಪುರ ಜಿಲ್ಲಾ ಮಠಾಧೀಶರ ಒಕ್ಕೂಟದ 15 ನೇ ಸಭೆ ಇಂದು ತಾಳಿಕೋಟೆ ತಾಲೂಕಿನ ಗುಂಡಕನಾಳ ಗ್ರಾಮದ ಬೃಹನ್ಮಠದಲ್ಲಿ ನಡೆಯಿತು. ಈ ಸಭೆಯ ಮೂಲ ಉದ್ದೇಶ ಸೈನಿಕರಿಗೆ ಹಾಗೂ ರೈತರಿಗೆ ಅನುಕೂಲ ಕಲ್ಪಿಸಲು ಕುರಿತು ಮತ್ತು ವಿಜಯಪುರ ಜಿಲ್ಲಾ ಸಂಪೂರ್ಣ ನೀರಾವರಿಯ ಕುರಿತು ಹಾಗೂ ಜಿಲ್ಲೆಯ ಸಮಗ್ರ ಅಭಿವೃದ್ಧಿಯ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು ಎಂದು ಶ್ರೀಗಳು ತಿಳಿಸಿದರು.