ಕರ್ನಾಟಕ

karnataka

ETV Bharat / state

ವಿಜಯಪುರ ಜಿ.ಪಂ ಸಿಇಒಗೆ ಕೊರೊನಾ ದೃಢ - ವಿಜಯಪುರ ಇತ್ತೀಚಿನ ಸುದ್ದಿ

ವಿಜಯಪುರ ಜಿಲ್ಲಾ ಪಂಚಾಯತ್​ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ ಅವರಿಗೆ ಕೋವಿಡ್-19 ದೃಢಪಟ್ಟಿದೆ. ಸದ್ಯ ಆರೋಗ್ಯ ಸ್ಥಿರವಾಗಿದ್ದು, ವೈದ್ಯರು ಹೋಂ ಐಸೋಲೇಶನ್​ನಲ್ಲಿರಲು ಸೂಚಿಸಿದ್ದಾರೆ.

ಸಿಇಒಗೆ ಕೊರೊನಾ ದೃಢ
ಸಿಇಒಗೆ ಕೊರೊನಾ ದೃಢ

By

Published : Sep 25, 2020, 7:36 PM IST

ವಿಜಯಪುರ:ಜಿಲ್ಲಾ ಪಂಚಾಯತ್​ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ ಅವರಿಗೆ ಕೋವಿಡ್-19 ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ತಮ್ಮ ಸಂಪರ್ಕಕ್ಕೆ ಬಂದಿರುವವರು ತಕ್ಷಣ ವೈದ್ಯಕೀಯ ಪರೀಕ್ಷೆಗೆ ಒಳಪಡುವಂತೆ ಸಿಇಒ ಮನವಿ ಮಾಡಿದ್ದಾರೆ.

ಅಲ್ಪ ಜ್ವರ ಮತ್ತು ಶೀತದಿಂದ ಬಳಲುತ್ತಿದ್ದ ಅವರು ವೈದ್ಯಕೀಯ ಪರೀಕ್ಷೆಗೆ ಒಳಗಾಗಿದ್ದರು. ಈ ವೇಳೆ ಕೋವಿಡ್​ ದೃಢವಾಗಿದೆ. ರಕ್ತ ಮತ್ತು ಸಿಟಿ ಸ್ಕ್ಯಾನ್ ವರದಿ ಸಾಮಾನ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ.

ಸದ್ಯ ಆರೋಗ್ಯ ಸ್ಥಿರವಾಗಿದ್ದು, ವೈದ್ಯರು ಹೋಂ ಐಸೋಲೇಶನ್​ನಲ್ಲಿರಲು ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಸಂಪರ್ಕಕ್ಕೆ ಬಂದಿರುವವರು ತಕ್ಷಣ ಪರೀಕ್ಷಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ.

ABOUT THE AUTHOR

...view details