ವಿಜಯಪುರ:ಖಾಸಗಿ ಕಂಪನಿಯಲ್ಲಿ ಬೇರೆಯವರ ಕೈ ಕೆಳಗೆ ಕೆಲಸ ಮಾಡುವ ಬದಲು ತಾನೇ ಸ್ವಾಭಿಮಾನ ಬದುಕು ಕಟ್ಟಿಕೊಳ್ಳಬಹುದು ಎಂದು ಯೋಚಿಸಿದ ಯುವ ರೈತನೋರ್ವ ಇಂದು ಕೃಷಿಯಲ್ಲೇ ಖುಷಿ ಕಂಡುಕೊಂಡಿದ್ದಾನೆ. ಸ್ವಾಭಿಮಾನದ ಬದುಕು ಸಾಗಿಸಲು ಸ್ವಗ್ರಾಮಕ್ಕೆ ಮರಳಿ ಸ್ವಂತ ಕೃಷಿಯಲ್ಲಿ ತೊಡಗಿಸಿಕೊಂಡ ಯುವಕನೋರ್ವ ಅದರಲ್ಲಿ ಯಶಸ್ಸು ಸಾಧಿಸಿ ಲಕ್ಷಾಧೀಶನಾಗಿದ್ದಾನೆ.
ಹೌದು, ತಾಲೂಕಿನ ಹಡಗಲಿ ಗ್ರಾಮದ ಸಿದ್ದು ರಾಮಪ್ಪ ಶೀಳಿನ್ ಎಂಬ ಯುವ ರೈತ ಐಟಿಐ ಮುಗಿಸಿ ಪುಣೆ, ಬೆಂಗಳೂರು ಸೇರಿದಂತೆ ವಿವಿಧ ಕಡೆ 6 ವರ್ಷಗಳ ಕಾಲ ಕೆಲಸ ಮಾಡುತ್ತಿದ್ದರು. ಬೇರೆಯವರ ಕೈ ಕೆಳಗೆ ಸೇವೆ ಮಾಡಿ ಬೇಸತ್ತು ಉದ್ಯೋಗಕ್ಕೆ ರಾಜೀನಾಮೆ ನೀಡಿ ತನ್ನ ಸ್ವಗ್ರಾಮಕ್ಕೆ ಮರಳಿದ ಸಿದ್ದು, ತಮ್ಮ ಬಳಿಯಿರುವ ಒಂದು ಎಕರೆ ಜಮೀನಿನಲ್ಲಿ ಪೇರಲೆ ಹಣ್ಣನ್ನು ಬೆಳೆದು ಲಕ್ಷಾಂತರ ರೂ. ಆದಾಯ ಗಳಿಸುತ್ತಾ ತನ್ನ ಕುಟುಂಬದ ಜೊತೆ ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ.
ನೈಸರ್ಗಿಕ ಗೊಬ್ಬರ ಬಳಕೆ :
ಸಿದ್ದು ಅವರಿಗೆ ಸಹೋದರ ಮಲ್ಲು ಹಾಗೂ ಅಳಿಯ ಪರಮಾನಂದ ಕೈ ಜೋಡಿಸಿದ್ದಾರೆ. ಇವರು ಕೇರಳ ಹಾಗೂ ಥೈಲ್ಯಾಂಡ್ನಿಂದ ವಿಎನ್ಆರ್ ತಳಿಯ ಪೇರಲೆ ಹಣ್ಣುಗಳ ತಳಿಗಳನ್ನು ತಂದು ತಮ್ಮ ಜಮೀನಿನಲ್ಲಿ ನಾಟಿ ಮಾಡಿದ್ದಾರೆ. ಅದಕ್ಕೆ ಯಾವುದೇ ರಾಸಾಯನಿಕ ಗೊಬ್ಬರ ಬಳಸದೆ ಗೋ ಮೂತ್ರ, ಸಗಣಿ ಸೇರಿದಂತೆ ನೈಸರ್ಗಿಕವಾಗಿ ದೊರೆಯುವ ಗೊಬ್ಬರವನ್ನು ಬಳಸಿ ಒಂದು ವರ್ಷದ ಅವಧಿಯಲ್ಲಿ 2 ಲಕ್ಷ ರೂ.ಗಳಷ್ಟು ಆದಾಯ ಗಳಿಸಿದ್ದಾರೆ. ಇದಕ್ಕೆ ಕೇವಲ 70-80 ಸಾವಿರ ರೂ. ಖರ್ಚು ಮಾಡಿದ್ದು, ಯಾವುದೇ ಕೆಲಸಗಾರರ ಅವಶ್ಯಕತೆ ಇಲ್ಲದೆ ಮನೆಯವರೇ ಸೇರಿಕೊಂಡು ಪೇರಲೆ ಹಣ್ಣನ್ನು ಬೆಳೆದು ಯಶಸ್ವಿ ಆಗಿದ್ದಾರೆ.
ಒಂದು ಹಣ್ಣು 2 ಕೆಜಿಗೂ ಅಧಿಕ ತೂಕ:
ಈ ಯುವ ರೈತರು ವಿಭಿನ್ನ ಮಾದರಿಯ ಪೇರಲೆ ಹಣ್ಣಿನ ತಳಿಯನ್ನು ಬೆಳೆದ ಪರಿಣಾಮ ಒಂದು ಗಿಡದಲ್ಲಿ 10 ರಿಂದ 15 ಪೇರಲೆ ಹಣ್ಣು ಬಿಟ್ಟಿದ್ದು, ಒಂದು ಹಣ್ಣು ಬರೋಬ್ಬರಿ 2 ಕೆಜಿಯಷ್ಟು ತೂಕ ತೂಗುತ್ತದೆ. ಈ ಹಣ್ಣಿಗೆ ಬೇರೆ ರಾಜ್ಯಗಳಲ್ಲಿ ಬಹಳ ಬೇಡಿಕೆ ಹಾಗೂ ಬೆಲೆ ಇದೆ. ಈ ಹಿನ್ನೆಲೆಯಲ್ಲಿ ಹೊರ ರಾಜ್ಯ, ದೇಶಗಳಿಂದ ವಿವಿಧ ಕಂಪನಿಗಳು ಇವರ ತೋಟಕ್ಕೆ ಬಂದು ಹಣ್ಣು ಕಟಾವು ಮಾಡಿಕೊಂಡು ಹೋಗುತ್ತಾರಂತೆ. ನಾಟಿ ಮಾಡುತ್ತಿರುವಾಗಲೇ ಹಣ್ಣಿಗೆ ಬೆಲೆ ನಿಗದಿ ಪಡಿಸಿ ಗುತ್ತಿಗೆ ಪಡೆದುಕೊಳ್ಳುತ್ತಾರಂತೆ.
ಬರದ ನಾಡಲ್ಲಿ ಬಂಗಾರ: