ವಿಜಯಪುರ: ತರಕಾರಿ ಮಾರುವ ಬೀದಿ ಬದಿ ಪ್ಯಾಪಾರಿಗಳು ಸರ್ಕಾರದ ಲಾಕ್ಡೌನ್ ಆದೇಶವನ್ನು ಗಾಳಿಗೆ ತೂರಿದ್ದಾರೆ.
ವಿಜಯಪುರದಲ್ಲಿ ಲಾಕ್ಡೌನ್ಗೆ ಸ್ಪಂದಿಸದ ಬೀದಿ ಬದಿ ತರಕಾರಿ ಪ್ಯಾಪಾರಿಗಳು
ತರಕಾರಿ ಬೀದಿ ಪ್ಯಾಪಾರಿಗಳು ಸರ್ಕಾರದ ಲಾಕ್ಡೌನ್ ಆದೇಶವನ್ನು ಗಾಳಿಗೆ ತೂರಿದ್ದಾರೆ. ಬೀದಿ ಬದಿ ತರಕಾರಿ ವ್ಯಾಪಾರಿಗಳು ಎಂದಿನಂತೆ ತಮ್ಮ ವಹಿವಾಟನ್ನು ಮುಂದುವರಿಸಿದ್ದಾರೆ.
ಲಾಕ್ಡೌನ್ ಘೋಷಣೆಗೆ ಸ್ಪಂದಿಸದ ವಿಜಯಪುರ ತರಕಾರಿ ಬೀದಿ ಪ್ಯಾಪಾರಿಗಳು
ರಾಜ್ಯ ಸರ್ಕಾರ ಕೊರೊನಾ ಎಮರ್ಜೆನ್ಸಿ ಹಿನ್ನಲೆ ಮಾರ್ಚ್ 31 ವರೆಗೆ ಯಾವುದೇ ಮಾರುಕಟ್ಟೆ ನಡೆಯದಂತೆ ಲಾಕ್ಡೌನ್ ಘೋಷಣೆ ಮಾಡಿದೆ. ಜಿಲ್ಲೆಯಲ್ಲಿ ನಿನ್ನೆಯಿಂದ 144 ಸೆಕ್ಷನ್ ಜಾರಿ ಮಾಡಿದರೂ ಸಹ ತರಕಾರಿ ಪ್ಯಾಪಾರಿಗಳು, ಬೀದಿ ವ್ಯಾಪಾರಿಗಳು ಮಾತ್ರ ತಮಗೂ ಇದಕ್ಕೂ ಯಾವುದೇ ಸಂಬಂಧವೇ ಇಲ್ಲದಂತೆ ರಾಜಾರೋಷವಾಗಿ ತರಕಾರಿ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದರು.
ಬಳಿಕ ಸ್ಥಳಕ್ಕಾಗಮಿಸಿದ ಗಾಂಧಿ ಚೌಕ್ ಠಾಣೆ ಪೊಲೀಸರು, ತರಕಾರಿ ಮಾರುಕಟ್ಟೆಯನ್ನು ತೆರವುಗೊಳಿಸಿದ್ದಾರೆ.