ವಿಜಯಪುರ: ಉತ್ತರ ಕರ್ನಾಟಕ ಭಾಗದಲ್ಲಿ ವೀರಭದ್ರೇಶ್ವರ ಜಾತ್ರೆ ಎಂದರೆ ಕೆಂಡದ ಜಾತ್ರೆ ಅಂತಲೇ ಕರೆಯುತ್ತಾರೆ. ಸಂತಾನ ಭಾಗ್ಯ, ಉದ್ಯೋಗ ಸೇರಿ ತಮ್ಮ ಹಲವು ಬೇಡಿಕೆಗಳ ಹರಕೆ ಕಟ್ಟಿಕೊಂಡು ಕೆಂಡ ಹಾಯುತ್ತಾರೆ. ಈ ಜಾತ್ರೆಯಲ್ಲಿ ಕೆಂಡ ಹಾಯಲು ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ಹಾಗೂ ಕರ್ನಾಟಕದ ವಿವಿ ಕಡೆಯಿಂದ ಭಕ್ತರು ಆಗಮಿಸುವುದು ವಿಶೇಷವಾಗಿದೆ.
ಯುಗಾದಿ ಹಬ್ಬದ ನಂತರ ಮೂರು ದಿನಗಳ ಕಾಲ ಈ ಜಾತ್ರೆ ನಡೆಯುತ್ತದೆ. ಕೊನೆ ದಿನ ಕೆಂಡ ಹಾಯುವ ದಿನವಾಗಿರುತ್ತದೆ. ಅಂದು ಅಸಂಖ್ಯಾ ಭಕ್ತರು ಕೆಂಡ ಹಾಯ್ದು ಭಕ್ತಿ ಪ್ರದರ್ಶಿಸುತ್ತಾರೆ.