ಕರ್ನಾಟಕ

karnataka

ETV Bharat / state

ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರೋಧಿಸಿ ಹಮಾಲರು, ವರ್ತಕರ ಪ್ರತಿಭಟನೆ - ವಿಜಯಪುರ ಎಪಿಎಂಸಿ ಹಮಾಲರ ಪ್ರತಿಭಟನೆ

ಮುದ್ದೇಬಿಹಾಳ ಮತಕ್ಷೇತ್ರ ವ್ಯಾಪ್ತಿಯ ತಾಳಿಕೋಟಿಯಲ್ಲಿ ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರೋಧಿಸಿ ವರ್ತಕರು ಕಾಯ್ದೆಯ ತಿದ್ದುಪಡಿ ಪ್ರತಿಗಳನ್ನು ದಹಿಸಿ ಪ್ರತಿಭಟನೆ ನಡೆಸಿದರು.

Protest against the amendment of the APMC Act
Protest against the amendment of the APMC Act

By

Published : Jun 2, 2020, 12:05 PM IST

ಮುದ್ದೇಬಿಹಾಳ:ತಾಳಿಕೋಟಿ ಪಟ್ಟಣದಲ್ಲಿ ಎಪಿಎಂಸಿ ತಿದ್ದುಪಡಿ ಕಾಯ್ದೆ ವಿರೋಧಿಸಿ, ವಹಿವಾಟು ಸ್ಥಗಿತಗೊಳಿಸಿ ವರ್ತಕರು, ಹಮಾಲರು ಕಾಯ್ದೆಯ ಕರಡು ಪ್ರತಿಯನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

ಎಪಿಎಂಸಿ ಕಾಯ್ದೆ ತಿದ್ದುಪಡಿ ಮಾಡಿ ಖಾಸಗೀಕರಣಗೊಳಿಸಿ ರೈತರ ಕತ್ತು ಹಿಸುಕುವಂತಹ ಕಾರ್ಯವನ್ನು ಸರ್ಕಾರ ಮಾಡುತ್ತಿದೆ. ಕೂಡಲೇ ತಿದ್ದುಪಡಿಗೊಳಿಸಿರುವ ಕಾಯ್ದೆಯನ್ನು ಹಿಂಪಡೆದುಕೊಳ್ಳಬೇಕೆಂದು ಎಪಿಎಂಸಿ ವರ್ತಕ ಖಾಜಾಹುಸೇನ್​ ಚೌದ್ರಿ ಆಗ್ರಹಿಸಿದರು.

ಬಹುರಾಷ್ಟ್ರೀಯ ಕಂಪನಿಗಳಿಗೆ ರೈತರ ದಾಸ್ತಾನು ಮಾರುವುದರಿಂದ ಕಂಪನಿಯವರು ಉದ್ದಾರ ಆಗುತ್ತಾರೆಯೇ ವಿನಃ ರೈತನು ಉದ್ದಾರ ಆಗಲು ಸಾದ್ಯವೇ ಇಲ್ಲವೆಂದು ಆರೋಪಿಸಿದರು. ಅಲ್ಲದೆ, ಕಾಯ್ದೆ ಹಿಂಪಡೆಯುವಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ABOUT THE AUTHOR

...view details