ವಿಜಯಪುರ: ಭೀಮಾತೀರದ ಹಂತಕ ಧರ್ಮರಾಜ್ ಚಡಚಣ ಬೆಂಬಲಿಗನ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ಬಂಧಿಸಲಾಗಿದೆ. ಈ ಬಗ್ಗೆ ಮಾಹಿತಿ ನೀಡಿದ ಎಸ್ಪಿ ಪ್ರಕಾಶ್ ನಿಕ್ಕಂ, ಹಲ್ಲೆ ನಡೆಸಿದ್ದ ಪುಟ್ಟು ಹಡಪದ ಎಂಬುವನನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.
ಭೀಮಾತೀರದ ಹಂತಕ ಬೆಂಬಲಿಗನ ಮೇಲಿನ ಹಲ್ಲೆ ಆರೋಪಿ ಅಂದರ್ - ಎಸ್ಪಿ ಪ್ರಕಾಶ್ ನಿಕ್ಕಂ
ಭೀಮಾತೀರದ ಹಂತಕ ಧರ್ಮರಾಜ್ ಚಡಚಣ ಬೆಂಬಲಿಗನ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ಬಂಧಿಸಲಾಗಿದೆ. ಈ ಬಗ್ಗೆ ಮಾಹಿತಿ ನೀಡಿದ ಎಸ್ಪಿ ಪ್ರಕಾಶ್ ನಿಕ್ಕಂ, ಹಲ್ಲೆ ನಡೆಸಿದ್ದ ಪುಟ್ಟು ಹಡಪದ ಎಂಬುವನನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.

ಎಸ್ಪಿ ಪ್ರಕಾಶ್ ನಿಕ್ಕಂ
ಎಸ್ಪಿ ಪ್ರಕಾಶ್ ನಿಕ್ಕಂ
ಕಳೆದ ರಾತ್ರಿ ವಿಜಯಪುರದಲ್ಲಿ ಧರ್ಮರಾಜ್ ಚಡಚಣ ಬೆಂಬಲಿಗ ಬಾಬೂರಾವ್ ಬಿರಾದಾರ ಎಂಬವವನು ತನ್ನ ಆಟೋದಲ್ಲಿ ಧರ್ಮರಾಜ ಚಡಚಣ ಹಾಡು ಹಾಕಿಕೊಂಡು ಹೋಗುತ್ತಿದ್ದಾಗ ಮತ್ತೊಂದು ಗುಂಪಿನ ಯುವಕರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಹಲ್ಲೆ ನಡೆಸಿದ್ದರು.
ಈ ಘಟನೆಗೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಎಸ್ಪಿ, ಈ ಸಂಬಂಧ ಮೂವರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಪುಟ್ಟು ಹಡಪದ ಎಂಬಾತನನ್ನು ಈಗಾಗಲೇ ಬಂಧಿಸಲಾಗಿದೆ. ಇನ್ನು ಇಬ್ಬರನ್ನು ಬಂಧಿಸಬೇಕಾಗಿದ್ದು ಅವರನ್ನು ಶೀಘ್ರ ಬಂಧಿಸಲಾಗುವುದು ಎಂದ ಎಸ್ಪಿ ತಿಳಿಸಿದ್ದಾರೆ.