ವಿಜಯಪುರ:ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿ ಮೇಲೆ ನಡೆದ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರ ವಿರುದ್ಧ ಜಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗುಂಡು ಹಾರಿಸಿ ಕೊಲೆ ಯತ್ನ; ನಾಲ್ಕು ಆರೋಪಿಗಳಿಗಾಗಿ ಹುಡುಕಾಟ - shootout case 2020
ಹಣದ ವಿಚಾರವಾಗಿ ಯುವಕನೋರ್ವನ ಮೇಲೆ ನಡೆದ ಫೈರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರ ವಿರುದ್ಧ ಇದೀಗ ಪ್ರಕರಣ ದಾಖಲಾಗಿದೆ. ಕಾರು ರಿಪೇರಿ ವಿಚಾರವಾಗಿ ವಾಗ್ವಾದ ನಡೆದು ಗುಂಡು ಹಾರಿಸಲಾಗಿದೆ ಎಂದು ತಿಳಿದು ಬಂದಿದ್ದು ಘಟನೆಯಲ್ಲಿ ಗಾಯಗೊಂಡ ವ್ಯಕ್ತಿ ಇದೀಗ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
![ಗುಂಡು ಹಾರಿಸಿ ಕೊಲೆ ಯತ್ನ; ನಾಲ್ಕು ಆರೋಪಿಗಳಿಗಾಗಿ ಹುಡುಕಾಟ Vijayapura shootout case; Case has been registered against four accused](https://etvbharatimages.akamaized.net/etvbharat/prod-images/768-512-9597414-691-9597414-1605799758774.jpg)
ವಿಜಯಪುರ ಶೂಟೌಟ್ ಪ್ರಕರಣ
ನಿನ್ನೆ ರಾತ್ರಿ ಮನಗೂಳಿ ಅಗಸಿಯ ಸ್ಮಶಾನದ ಬಳಿ ತುಳಸಿರಾಮ ಹರಿಜನ ಮತ್ತು ವಿಕಾಸ ಎಂಬವರು ಬುದ್ದು ರಾಠೋಡ್ ಎಂಬುವನ ಮೇಲೆ ಗುಂಡು ಹಾರಿಸಿ ನಂತರ ಚಾಕುವಿಂದ ಇರಿದು ಕೊಲೆಗೆ ಯತ್ನಿಸಿದ್ದರು.
ದಾಳಿಯಲ್ಲಿ ಗಾಯಗೊಂಡಿರುವ ಬುದ್ದು ರಾಠೋಡ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಪರಾರಿಯಾಗಿರುವ ಆರೋಪಿಗಳ ಪತ್ತೆಗೆ ಜಾಲ ಬೀಸಲಾಗಿದೆ ಎಂದು ಎಸ್ಪಿ ಅನುಪಮ್ ಅಗರವಾಲ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.