ವಿಜಯಪುರ: ದ್ವಿತೀಯ ಪಿಯುಸಿ ಪರೀಕ್ಷೆ ಆರಂಭವಾದ ಕೆಲ ಗಂಟೆಗಳಲ್ಲೇ ಕಿಡಿಗೇಡಿಗಳು ಮೊಬೈಲ್ನಲ್ಲಿ ಫೋಟೊ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಘಟನೆ ಜಿಲ್ಲೆಯ ಇಂಡಿ ಪಟ್ಟಣದ ಶಾಂತೇಶ್ವರ ವಿದ್ಯಾವರ್ಧಕ ಸಂಘದಲ್ಲಿ ನಡೆದಿದೆ.
ಪಿಯು ಪರೀಕ್ಷೆ ಶುರುವಾದ ಒಂದು ಗಂಟೆಯಲ್ಲೇ ಫೋಟೊ ತೆಗೆದು ಪೋಸ್ಟ್ ಮಾಡಿದ ಕಿಡಿಗೇಡಿಗಳು - ವಿಜಯಪುರ ಲೆಟೆಸ್ಟ್ ನ್ಯೂಸ್
ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದ ಶಾಂತೇಶ್ವರ ವಿದ್ಯಾವರ್ಧಕ ಸಂಘದಲ್ಲಿ ದ್ವಿತೀಯ ಪಿಯುಸಿ ಭೌತಶಾಸ್ತ್ರ ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವ ಘಟನೆ ನಡೆದಿದೆ.

Second PUC Physics question paper leak
ಪರೀಕ್ಷೆ ಆರಂಭವಾಗಿ ಒಂದೇ ಗಂಟೆಯಲ್ಲಿ ಭೌತಶಾಸ್ತ್ರ ಪ್ರಶ್ನೆಪತ್ರಿಕೆ ಆನ್ಲೈನ್ನಲ್ಲಿ ಲಭ್ಯವಾಗಿದೆ, ಪ್ರಶ್ನೆ ಪತ್ರಿಕೆ ನೀಡಿದ ಬೆನ್ನಲ್ಲೆ ಮೊಬೈಲ್ನಲ್ಲಿ ಪೋಟೋ ಕ್ಲಿಕ್ಕಿಸಿಕೊಂಡ ಕೆಲ ಕಿಡಿಗೆಡಿಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಪರೀಕ್ಷಾ ಕೇಂದ್ರ ಸುತ್ತ ಬಿಗಿ ಭದ್ರತೆ ಇದ್ದರೂ ಹೇಗೆ ಮೊಬೈಲ್ ತೆಗೆದುಕೊಂಡು ಹೋದರು ಎಂದು ತಿಳಿದುಬಂದಿಲ್ಲ. ಇದರಲ್ಲಿ ಕಾಲೇಜಿನ ಸಿಬ್ಬಂದಿ ಕೈವಾಡವಿರುವ ಕುರಿತು ಶಂಕೆ ವ್ಯಕ್ತವಾಗಿದೆ.
ಘಟನೆ ಕುರಿತು ಡಿಡಿಪಿಯು, ಜಿಎಸ್ ಪೂಜಾರ ಹಾಗೂ ಇತರ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ.