ವಿಜಯಪುರ:ವಾರದ ಹಿಂದೆ ತೋಟದ ಮನೆಯಲ್ಲಿ ರೌಡಿ ಶೀಟರ್ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ ಪ್ರಕರಣವನ್ನು ಭೇದಿಸಿರುವ ಆದರ್ಶ ನಗರ ಪೊಲೀಸರು ಐವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅಪ್ಪಣ್ಣಗೌಡ ಬಾಗಾಯತ, ಸಂತೋಷ ರಾಠೋಡ್, ಶ್ಯಾಮರಾಯ ರಾಠೋಡ್, ವಿಲಾಸ ರಾಠೋಡ್ ಹಾಗೂ ಸಂತೋಷ ಚವ್ಹಾಣ ಬಂಧಿತ ಆರೋಪಿಗಳು. ಇವರು ಕಳೆದ ಭಾನುವಾರ ನಗರದ ಹೊರವಲಯದ ಇಟ್ಟಂಗಿಹಾಳದಲ್ಲಿ ರೌಡಿಶೀಟರ್ ದಸ್ತಗಿರಿಸಾಬ್ ಮಮದಾಪೂರನನ್ನು ಆತನ ತೋಟದ ಮನೆಯಲ್ಲಿ ಹತ್ಯೆ ಮಾಡಿ ಪರಾರಿಯಾಗಿದ್ದರು.