ವಿಜಯಪುರ :ಇಲ್ಲಿನ ವಾರ್ಡ್ ಸಂಖ್ಯೆ 29ರ ರಾಜಾಜಿ ನಗರದಲ್ಲಿ ಚರಂಡಿ ಪೈಪ್ ಒಡೆದು ಬಡಾವಣೆಯ ರಸ್ತೆಯಲ್ಲೆಲ್ಲ ನೀರು ನುಗ್ಗಿದೆ. ಪರಿಣಾಮ ಕೆಎಬಿ ಹಿಂಭಾಗದ ರಸ್ತೆಯಲ್ಲಿ ಚರಂಡಿ ನೀರು ಭರ್ತಿಯಾಗಿದ್ದು, ಸಾರ್ವಜನಿಕರು ಗಬ್ಬು ನಾರುತ್ತಿರುವ ವಾಸನೆಯಲ್ಲಿಯೇ ಓಡಾಡುವಂತಾಗಿದೆ.
ಚರಂಡಿ ಪೈಪ್ ಒಡೆದು ಗಬ್ಬು ನಾರುತ್ತಿರುವ ಬಡಾವಣೆ: ಅಧಿಕಾರಿಗಳಿಗೆ ಹಿಡಿಶಾಪ - Vijayapura drainage problem
ಪಾಲಿಕೆ ವ್ಯಾಪ್ತಿಯ 29ನೇ ವಾರ್ಡ್ನಲ್ಲಿ ಕಳೆದ ಹಲವು ದಿನಗಳಿಂದ ಚರಂಡಿ ಪೈಪ್ಲೈನ್ ಒಡೆದು ಚರಂಡಿ ನೀರು ರಸ್ತೆಯ ಮೇಲೆ ಹರಿಯುತ್ತಿದ್ದು, ಸಾರ್ವಜನಿಕರು ಗಬ್ಬು ನಾರುತ್ತಿರುವ ವಾಸನೆಯಲ್ಲಿಯೇ ಓಡಾಡುವಂತಾಗಿದೆ. ಸ್ಥಳಕ್ಕೆ ಬಂದು ಸಮಸ್ಯೆ ಆಲಿಸದ ಅಧಿಕಾರಿಗಳಿಗೆ ಹಿಡಿಶಾಪ ಹಾಕಿದ್ದಾರೆ.
ನೀರು ಸರಾಗವಾಗಿ ಹರಿದುಹೋಗುವಂತೆ ಹಾಗೆಯೇ ಒಡೆದ ಚರಂಡಿ ಪೈಪ್ಗಳನ್ನು ಸರಿಪಡಿಸುವಂತೆ ಮಹಾನಗರ ಪಾಲಿಕೆಗೆ ಮನವಿ ಮಾಡಿಕೊಳ್ಳಲಾಗಿದೆ. ಆದರೆ, ಸಂಬಂಧಿತ ಅಧಿಕಾರಿಗಳು ಮಾತ್ರ ಇತ್ತಕಡೆ ನೋಡುತ್ತಿಲ್ಲ ಎಂದು ಸ್ಥಳೀಯರು ನಿರ್ಲಕ್ಷ್ಯ ತೋರಿದ ಅಧಿಕಾರಿಗಳಿಗೆ ಹಿಡಿಶಾಪ ಹಾಕಿದ್ದಾರೆ.
ಗಬ್ಬು ನಾರುತ್ತಿರುವ ಚರಂಡಿ ನೀರಿನ ವಾಸನೆಯಿಂದ ಸಾಂಕ್ರಾಮಿಕ ಕಾಯಿಲೆಗಳು ಹರಡಬಹುದು. ರಸ್ತೆಯ ಅಕ್ಕ - ಪಕ್ಕ ಮಕ್ಕಳು, ವಯೋವೃದ್ಧರು, ಮಹಿಳೆಯರು ಓಡಾಡುತ್ತಿರುತ್ತಾರೆ. ಈ ರೀತಿ, ಚರಂಡಿ ನೀರು ಒಂದೆಡೆ ಸಂಗ್ರಹವಾಗುವುದರಿಂದ ನಗರದ ನಿವಾಸಿಗರು ರೋಗಕ್ಕೆ ತುತ್ತಾಗಬಹುದು. ಆದ್ದರಿಂದ ಸಂಬಂಧಿತ ಅಧಿಕಾರಿಗಳು ಪರಿಸ್ಥಿತಿ ಮನಗಂಡು ಒಡೆದು ಹೋದ ಚರಂಡಿ ಪೈಪ್ಗಳನ್ನು ಸರಿಪಡಿಸುವಂತೆ ಸ್ಥಳೀಯರು ಒತ್ತಾಯ ಮಾಡಿದ್ದಾರೆ.