ಕರ್ನಾಟಕ

karnataka

ETV Bharat / state

ವಿಜಯಪುರ: ವಿವಿಧ ಸೌಲಭ್ಯ ನೀಡಲು ಖಾಸಗಿ ಆಸ್ಪತ್ರೆ ವೈದ್ಯರ ಒತ್ತಾಯ - Private hospital doctors news

ಆಮ್ಲಜನಕ ಪೂರೈಕೆ‌, ವೈದ್ಯರಿಗೆ ವಸತಿ ಸೌಲಭ್ಯ ಸೇರಿದಂತೆ ಇತರ ಸೌಲಭ್ಯವನ್ನು ಖಾಸಗಿ ಆಸ್ಪತ್ರೆಗಳಿಗೆ ಸರ್ಕಾರ ನೀಡಬೇಕು ಎಂದು ಕೆಪಿಎಂಪಿಟಿ ಮುಖಂಡ ಡಾ. ಎಲ್.ಎಚ್. ಬಿದರಿ ಒತ್ತಾಯಿಸಿದ್ದಾರೆ.

ಖಾಸಗಿ ಆಸ್ಪತ್ರೆ ವೈದ್ಯರ ಸುದ್ದಿಗೋಷ್ಠಿ
ಖಾಸಗಿ ಆಸ್ಪತ್ರೆ ವೈದ್ಯರ ಸುದ್ದಿಗೋಷ್ಠಿ

By

Published : Sep 29, 2020, 4:32 PM IST

Updated : Sep 29, 2020, 4:53 PM IST

ವಿಜಯಪುರ:ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ಖಾಸಗಿ ಆಸ್ಪತ್ರೆಗಳ ಸಮಸ್ಯೆ ಆಲಿಸಲು ಸರ್ಕಾರ ಮುಂದಾಗಬೇಕು. ಆಮ್ಲಜನಕ ಪೂರೈಕೆ‌, ವೈದ್ಯರಿಗೆ ವಸತಿ ಸೌಲಭ್ಯ ಸೇರಿದಂತೆ ಇತರ ಸೌಲಭ್ಯ ನೀಡಲು ಮುಂದಾಗಬೇಕು ಎಂದು ಕೆಪಿಎಂಪಿಟಿ ಮುಖಂಡ ಡಾ. ಎಲ್.ಎಚ್. ಬಿದರಿ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಲ್ಲೆಯ15 ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಚಿಕಿತ್ಸೆ ನೀಡಲಾಗುತ್ತಿದೆ. 4 ಸಾವಿರಕ್ಕೂ ಅಧಿಕ ಜನರು ಈಗಾಗಲೇ ಗುಣಮುಖರಾಗಿದ್ದಾರೆ. ಕೆಲವು ವ್ಯಕ್ತಿಗಳು ಖಾಸಗಿ ಆಸ್ಪತ್ರೆಗಳು ಹೆಚ್ಚಿನ‌ ಬಿಲ್​ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿ, ವೈದ್ಯರ ಮೇಲೆ ಹಲ್ಲೆಗೆ ಮುಂದಾಗುತ್ತಿರುವುದಲ್ಲದೇ, ಜಾತಿ ನಿಂದನೆ‌ ಪ್ರಕರಣ ದಾಖಲಿಸಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು. ಇತ್ತ ಜಿಲ್ಲೆಯ ಖಾಸಗಿ ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ಕೊರತೆ ಇದೆ. ಆಮ್ಲಜನಕ ಸರಿಯಾಗಿ ಪೂರೈಕೆಯಾಗುತ್ತಿಲ್ಲ‌‌.

ಖಾಸಗಿ ಆಸ್ಪತ್ರೆ ವೈದ್ಯರ ಸುದ್ದಿಗೋಷ್ಠಿ

ರೋಗಿಗಳನ್ನ ಉಳಿಸಲು ಅಲೆದಾಟ ನಡೆಸಿ ದುಬಾರಿ ಬೆಲೆ ಆಮ್ಲಜನಕ ಖರೀದಿಸಿ ಚಿಕಿತ್ಸೆ‌‌‌ ಕೊಡಲಾಗುತ್ತಿದೆ. ಹಾಗಾಗಿ ಹೆಚ್ಚಿನ ಬಿಲ್​​ ಮಾಡಿದ್ರೆ, ಕೆಲವು ವ್ಯಕ್ತಿಗಳು ಆಸ್ಪತ್ರೆಗೆ ಕೆಟ್ಟ ಹೆಸ್ರು ತರುತ್ತಿರುವುದು ಸರಿಯಲ್ಲ. ಮಧ್ಯಮ ವರ್ಗದವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳಲಾಗದಿದ್ದರೆ. ಜಿಲ್ಲಾಸ್ಪತ್ರೆಯಲ್ಲಿ ಬಡವರಿಗೆ ಅವಕಾಶ ನೀಡಿದ್ರೆ. ನಾವು ಕೂಡ ರೋಗಿಗಳಿಗೆ ಚಿಕಿತ್ಸೆ ನೀಡಲು ಸಹಕಾರ ನೀಡುತ್ತೇವೆ. ಸದನದಲ್ಲಿ ವಿಜಯಪುರ ನಗರ ಶಾಸಕರು 18 ಲಕ್ಷ ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ‌. ಆದ್ರೆ ಒಬ್ಬ ರೋಗಿ ತಿಂಗಳ ಕಾಲ ಐಸಿಯುನಲ್ಲಿದ್ದರು. ಹೀಗಾಗಿ 8 ರಿಂದ 10 ಲಕ್ಷ ಬಿಲ್ಲ ಆಗಿರಬೇಕು. ಖಾಸಗಿ ಆಸ್ಪತ್ರೆಗಳ ವಿರುದ್ಧ ದೂರುತ್ತಿರುವ ಶಾಸಕರು ವಿಜಯಪುರದಲ್ಲಿ ಚಿಕಿತ್ಸೆ ಪಡೆದಿಲ್ಲ ಬದಲಿಗೆ ಮಣಿಪಾಲ ಚಿಕಿತ್ಸೆ ಪಡೆದಿದ್ದಾರೆ. ಆದ್ರೆ ಆಧಾರವಿಲ್ಲದೇ ಶಾಸಕರು ಆರೋಪ‌ ಮಾಡುವುದು ಸರಿಯಲ್ಲ‌. ಕೊರೊನಾ‌ ಸಂದರ್ಭದಲ್ಲಿ ಶಾಸಕರೇ ಎಲ್ಲಿದ್ದೀರಿ? ಎಷ್ಟು ಮೀಟಿಂಗ್‌ಗಳಲ್ಲಿ ಭಾಗಿಯಾಗಿದ್ದೀರಿ ಎಂದು ಅವ್ರೆ ಪ್ರಶ್ನೇ ಮಾಡಿಕೊಳ್ಳಬೇಕು. ಶಾಸಕರು ಯಾವುದೇ ಆಧಾರವಿಲ್ಲದೇ ಸದನದಲ್ಲಿ ಮಾತಾಡುವುದು ಸರಿಯಲ್ಲ ಎಂದು ಪರೋಕ್ಷವಾಗಿ ಶಾಸಕ ಯತ್ನಾಳ ವಿರುದ್ಧ ಡಾ. ಬಿದರಿ ಸಿಡಿಮಿಡಿಗೊಂಡರು.

Last Updated : Sep 29, 2020, 4:53 PM IST

ABOUT THE AUTHOR

...view details