ಕರ್ನಾಟಕ

karnataka

ETV Bharat / state

ವಿಜಯಪುರ: ಪ್ರತ್ಯೇಕ ಕೊಲೆ ಪ್ರಕರಣ, ಆರೋಪಿಗಳ ಬಂಧನ - ಎಸ್ಪಿ ಅನುಪಮ್ ಅಗರವಾಲ್

ವಿಜಯಪುರದಲ್ಲಿ ನಡೆದ ಪ್ರತ್ಯೇಕ ಕೊಲೆ ಪ್ರಕರಣಗಳನ್ನು ಭೇದಿಸಿರುವ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

Vijayapura
ಆರೋಪಿಗಳ ಬಂಧಿಸಿದ ಖಾಕಿ ಪಡೆ

By

Published : Jun 23, 2020, 1:43 PM IST

ವಿಜಯಪುರ: ನಗರದಲ್ಲಿ ನಡೆದ ಪ್ರತ್ಯೇಕ ಕೊಲೆ ಪ್ರಕರಣಗಳಲ್ಲಿ ಭಾಗಿಯಾದ ಆರೋಪಿಗಳನ್ನು ನಗರ ಪೊಲೀಸರು ಬಂಧಿಸಿದ್ದಾರೆ.

ಪ್ರಕರಣ-1:

ಜೂನ್ 13 ರಂದು ತಾಲೂಕಿನ‌ ಕನ್ನೂರ ಗ್ರಾಮದ ಕಿನಾಲ ಕಾಲುವೆ ಪಾಟಲು ಬುದ್ನಾಳ (26) ಎಂಬ ವ್ಯಕ್ತಿಯ ಕೊಲೆಯಾಗಿತ್ತು. ಈ ಪ್ರಕರಣದಲ್ಲಿ ಆರೋಪಿ ಕ್ಯಾತನಕೇರಿ ಗ್ರಾಮದ ಮಾಳಪ್ಪ ದೇವಕತೆ ಮೃತನ ಸಂಬಂಧಿಯಾಗಿದ್ದು ರೇಷ್ಮಾ ಬುದ್ನಾಳ ಎಂಬವರನ್ನು ಅಪಹರಿಸಿದ್ದ. ಈ ಕುರಿತು ಹೊರ್ತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಸಿಟ್ಟಿನಿಂದ ಆರೋಪಿ ಮಾಳಪ್ಪ ದೇವಕತೆ ಪಾರ್ಟಿ ಕೊಡುವ ನೆಪದಲ್ಲಿ ಪಾಲಟು ಬುದ್ನಾಳನನ್ನು ಬಡಿಗೆಯಿಂದ ಹೊಡೆದು ಶವವನ್ನು ಪೆಟ್ರೋಲ್ ಸುರಿದು ಸುಟ್ಟು ಹಾಕಿದ್ದ.

ಈ ಬಗ್ಗೆ ತನಿಖೆ ಕೈಗೊಂಡ ಗ್ರಾಮೀಣ ಠಾಣೆ ಪೊಲೀಸರು ಆರೋಪಿ ಮಾಳಪ್ಪನನ್ನು ಬಂಧಿಸಿದ್ದು, ಇನ್ನಿಬ್ಬರು ಆರೋಪಿಗಳಿಗೆ ಹುಡುಕಾಟ ನಡೆಸುತ್ತಿದ್ದಾರೆ.

ಪ್ರತ್ಯೇಕ ಕೊಲೆ ಪ್ರಕರಣ, ಆರೋಪಿಗಳ ಸೆ

ಪ್ರಕರಣ-2:

ಹೆಂಡ್ತಿ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂದು ಶಂಕಿಸಿ ಅಣ್ಣನನ್ನು ಕೊಲೆಗೈದ ಪ್ರಕರಣ 2019 ರಲ್ಲಿ ನಡೆದಿತ್ತು. ಈ ಪ್ರಕರಣದಲ್ಲಿ ಆರೋಪಿ ಜಟ್ಟಗಿ ಗ್ರಾಮದ ಯಮುನಪ್ಪ ಮುದ್ದಪ್ಪ ಇಟಗಿ (45)ಯನ್ನು ಬಂಧಿಸಲಾಗಿದೆ.

ABOUT THE AUTHOR

...view details