ಕರ್ನಾಟಕ

karnataka

ETV Bharat / state

ವಿಜಯಪುರ : ಅಕ್ರಮವಾಗಿ ಗಾಂಜಾ ಬೆಳೆದಿದ್ದ ಆರೋಪಿಗಳ ಬಂಧನ - Vijayapura crime latest news

ವಿಜಯಪುರದಲ್ಲಿ ಅಕ್ರಮವಾಗಿ ಗಾಂಜಾ ಬೆಳೆದಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

Vijayapura
Vijayapura

By

Published : Sep 30, 2020, 11:15 PM IST

ವಿಜಯಪುರ:ಗಾಂಜಾ ಬೆಳೆದಿದ್ದ ಎರಡು ಜಮೀನುಗಳ ಮೇಲೆ ಪ್ರತ್ಯೇಕವಾಗಿ ದಾಳಿ ನಡೆಸಿದ ಪೊಲೀಸರು 20 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ.

ಮನಗೂಳಿ ಗ್ರಾಮದ ಶಂಕ್ರಪ್ಪ ಕಾಳಗಿ ಎಂಬುವವರ ಹೊಲದ ಮೇಲೆ ಡಿವೈಎಸ್ ಪಿ .ಶಾಂತವೀರ ನೇತೃತ್ವದಲ್ಲಿ ಮನಗೂಳಿ ಪಿಎಸ್ ಐ ಶಿವೂರ ಅವರ ತಂಡ ದಾಳಿ ನಡೆಸಿ 15 ಕೆಜಿ ಗಾಂಜಾ ವಶಪಡಿಸಿಕೊಂಡಿದೆ.

ಇನ್ನು ಸಂಗಮೇಶ ಕಾಳಗಿ ಎಂಬುವವರ ಜಮೀನಿನಲ್ಲಿ 5 ಕೆಜಿ ಸೇರಿದಂತೆ ಒಟ್ಟು 20 ಕೆಜಿ ಗಾಂಜಾ ವಶಪಡಿಸಿಕೊಂಡು ಇಬ್ಬರು ಮಾಲೀಕರನ್ನು ಬಂಧಿಸಿದ್ದಾರೆ.

ಈ ಸಂಬಂಧ ಮನಗೂಳಿ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕವಾಗಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details