ಕರ್ನಾಟಕ

karnataka

ETV Bharat / state

ಕೊರೊನಾ ನಿಯಮ ಗಾಳಿಗೆ ತೂರಿ ಹಬ್ಬದ ಸಾಮಗ್ರಿ ಖರೀದಿಗೆ ಮುಗಿಬಿದ್ದ ಜನ - ನಗರದ ಎಸ್‌ಬಿಎಸ್ ಮಾರುಕಟ್ಟೆ ರಸ್ತೆ

ಸ್ಟೇಷನ್ ರಸ್ತೆ, ಅಂಬೇಡ್ಕರ್ ಕ್ರೀಡಾಂಗಣ ರಸ್ತೆ, ಉಪಲಿ ಬುರ್ಜ್ ರಸ್ತೆ ಸೇರಿದಂತೆ ನಗರ ಬಹುತೇಕ ಭಾಗದಲ್ಲಿ ಹಣ್ಣು-ಹೂವು, ತರಕಾರಿ, ಬಾಳೆಗಿಡ ಸೇರಿದಂತೆ ಹಬ್ಬದ ಅಗತ್ಯ ಸಾಮಗ್ರಿಗಳ ಖರೀದಿ ಜೋರಾಗಿ ನಡೆಯುತ್ತಿರುವ ದ್ಯಶ್ಯ ಗುಮ್ಮಟ ನಗರಿಯಲ್ಲಿ ಕಾಣುತ್ತಿದೆ.

vijayapura-peoples-break-covid-rule-issue-news
ಹಬ್ಬದ ಸಾಮಗ್ರಿ ಖರೀದಿಗೆ ಮುಗಿಬಿದ್ದ ವಿಜಯಪುರ ಜನ

By

Published : Nov 14, 2020, 7:05 PM IST

ವಿಜಯಪುರ:ಕೊರೊನಾ ಭಯವನ್ನೇ ಮರೆತ ಜನರು, ಹಬ್ಬದ ಅಗತ್ಯ ಸಾಮಗ್ರಿಗಳ ಖರೀದಿಗೆ ಮುಗಿಬಿದ್ದ ಘಟನೆ ನಗರದ ಎಸ್‌ಬಿಎಸ್ ಮಾರುಕಟ್ಟೆ ರಸ್ತೆಯಲ್ಲಿ ನಡೆದಿದೆ.

ಹಬ್ಬದ ಸಾಮಗ್ರಿ ಖರೀದಿಗೆ ಮುಗಿಬಿದ್ದ ವಿಜಯಪುರ ಜನ

ಸ್ಟೇಷನ್ ರಸ್ತೆ, ಅಂಬೇಡ್ಕರ್ ಕ್ರೀಡಾಂಗಣ ರಸ್ತೆ, ಉಪಲಿ ಬುರ್ಜ್ ರಸ್ತೆ ಸೇರಿದಂತೆ ನಗರ ಬಹುತೇಕ ಭಾಗದಲ್ಲಿ ಹಣ್ಣು-ಹೂವು, ತರಕಾರಿ, ಬಾಳೆಗಿಡ ಸೇರಿದಂತೆ ಹಬ್ಬದ ಅಗತ್ಯ ಸಾಮಗ್ರಿಗಳ ಖರೀದಿ ಜೋರಾಗಿ ನಡೆಯುತ್ತಿರುವ ದ್ಯಶ್ಯ ಗುಮ್ಮಟ ನಗರಿಯಲ್ಲಿ ಕಾಣುತ್ತಿದೆ. ಸಿದ್ದೇಶ್ವರ ಮಂದಿರ ರಸ್ತೆ ಜನಜಂಗುಳಿಯಿಂದ ಕೂಡಿದ ಪರಿಣಾಮ ಬೈಕ್ ಸವಾರರು ಮುಂದೆ ಸಾಗಲು ಹೆಣಗಾಟ ನಡೆಸುವಂತಾಗಿದೆ.

ಜಿಲ್ಲೆಯಲ್ಲಾದ ಅತಿವೃಷ್ಟಿ ಹೊಡೆದಕ್ಕೆ ಬಾಳೆಗಿಡ, ಕಬ್ಬು, ಹೂವಿನ ಬೆಳೆ ಹಾಳಾದ ಪರಿಣಾಮ ಮಾರುಕಟ್ಟೆಯಲ್ಲಿ ಅವುಗಳ ಬೆಲೆ ಗಗನಕ್ಕೇರಿದೆ. ಬೆಳಕಿನ ಹಬ್ಬಕ್ಕೆ ಅನಿವಾರ್ಯ ಎಂಬ ಪರಿಸ್ಥಿತಿಗೆ ಜನರು ಖರೀದಿಗೆ ಮುಗಿಬಿದ್ದಿದ್ದಾರೆ. ಇನ್ನು ಸಾಮಗ್ರಿಗಳ ಖರೀದಿಗೆ ಬರುವ ಜನ‌ರು, ಸಾಮಾಜಿಕ ಅಂತರ, ಮಾಸ್ಕ್ ಧರಿಸದೆ ಓಡಾಟ ನಡೆಸುತ್ತಿರುವುದು ಕೊರೊನಾ ವೈರಸ್ ಹರಡಲು ದಾರಿ ಮಾಡಿಕೊಟ್ಟಂತಾಗಿದೆ.

ABOUT THE AUTHOR

...view details