ವಿಜಯಪುರ:ಇಲ್ಲಿನಶಾಂತಿನಗರದ ಸರ್ಕಾರಿ ಆಸ್ಪತ್ರೆಯ ಬಳಿಯ ರಸ್ತೆ ಪಕ್ಕದಲ್ಲೇ ಪಿಪಿಇ ಕಿಟ್ ಎಸೆದು ಹೋಗಿರುವುದರ ಪರಿಣಾಮ ಸಾರ್ವಜನಿಕರು ಆತಂಕಗೊಂಡಿದ್ದಾರೆ.
ವಿಜಯಪುರ: ಸರ್ಕಾರಿ ಆಸ್ಪತ್ರೆಯ ಬಳಿ ಬಿದ್ದಿದ್ದ ಪಿಪಿಇ ಕಿಟ್ ಕಂಡು ಆತಂಕಗೊಂಡ ಜನ
ಕೊರೊನಾ ಮಹಾಮಾರಿಯ ವಿರುದ್ಧ ಜನರು ಭಯಭೀತರಾಗಿದ್ದು, ಈಗಾಗಲೇ ಹಲವಾರು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಆದರೆ ಶಾಂತಿನಗರದ ಸರ್ಕಾರಿ ಆಸ್ಪತ್ರೆಯ ಬಳಿಯ ರಸ್ತೆಯಲ್ಲಿ ಪಿಪಿಇ ಕಿಟ್ನ್ನು ಎಸೆಯಲಾಗಿದ್ದು, ಜನರೀಗ ಆತಂಕಕ್ಕೊಳಗಾಗಿದ್ದಾರೆ.
ಸರ್ಕಾರಿ ಆಸ್ಪತ್ರೆಯ ಬಳಿ ಬಿದ್ದಿದ್ದ ಪಿಪಿಇ ಕಿಟ್
ಕೊರೊನಾ ಸೋಂಕಿತರನ್ನು ಕೋವಿಡ್ ಆಸ್ಪತ್ರೆಗೆ ಶಿಫ್ಟ್ ಮಾಡಿ ನಂತರ ಇಲ್ಲಿಗೆ ತಂದು ಬಿಸಾಕಿರುವ ಶಂಕೆ ವ್ಯಕ್ತವಾಗಿದೆ. ಅಲ್ಲದೇ ರಸ್ತೆ ಬದಿಯ ಮುಳ್ಳಿನ ಪೊದೆಯಲ್ಲಿ ಪಿಪಿಇ ಕಿಟ್ ಪತ್ತೆಯಾಗಿರುವುದರಿಂದ ಅಕ್ಕಪಕ್ಕದ ಜನರಿಗೆ ಕೊರೊನಾ ಹರಡುವ ಭೀತಿ ಎದುರಾಗಿದೆ.
ಬಳಕೆಯಾದ ಪಿಪಿಇ ಕಿಟ್ ಕಂಡು ಸ್ಥಳೀಯ ಮಹಿಳೆಯರಲ್ಲಿ ಆತಂಕ ಮೂಡಿದ್ದು, ತಕ್ಷಣ ಆಸ್ಪತ್ರೆ ಸಿಬ್ಬಂದಿ, ಇಲ್ಲವೇ ಮಹಾನಗರ ಪಾಲಿಕೆ ಸಿಬ್ಬಂದಿ ಪಿಪಿಇ ಕಿಟ್ ತೆರವುಗೊಳಿಸಿ ಪೂರ್ಣ ಪ್ರದೇಶವನ್ನು ಸ್ಯಾನಿಟೈಸ್ ಮಾಡಬೇಕೆಂದು ಆಗ್ರಹಿಸಿದ್ದಾರೆ.