ಕರ್ನಾಟಕ

karnataka

ETV Bharat / state

ವಿಜಯಪುರ: ನವಜಾತ ಶಿಶುವನ್ನು ಕಾಲುವೆ ಬಳಿ ಎಸೆದುಹೋದ ನಿರ್ದಯಿ ತಾಯಿ - Newborn baby girl found in Vijayapura

ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಬಳಗಾನೂರು ಗ್ರಾಮದ ಕಾಲುವೆ ಬಳಿ ನವಜಾತ ಹೆಣ್ಣು ಶಿಶು ಪತ್ತೆಯಾಗಿದೆ. ಈ ಮಗುವಿಗೆ ತಾಳಿಕೋಟೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.

ನವಜಾತ ಶಿಶುವನ್ನು ಕಾಲುವೆ ಬಳಿ ಎಸೆದುಹೋದ ನಿರ್ದಯಿ ತಾಯಿ
ನವಜಾತ ಶಿಶುವನ್ನು ಕಾಲುವೆ ಬಳಿ ಎಸೆದುಹೋದ ನಿರ್ದಯಿ ತಾಯಿ

By

Published : Jan 20, 2022, 6:22 PM IST

Updated : Jan 20, 2022, 11:26 PM IST

ವಿಜಯಪುರ: ಕಾಲುವೆ ಪಕ್ಕದಲ್ಲಿ ನವಜಾತ ಹೆಣ್ಣು ಶಿಶು ಪತ್ತೆಯಾಗಿರುವ ಘಟನೆ ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಬಳಗಾನೂರು ಗ್ರಾಮದಲ್ಲಿ ನಡೆದಿದೆ. ಜನಿಸಿದ ಬಳಿಕ ಮಗುವನ್ನು ಬಟ್ಟೆಯಲ್ಲಿ ಸುತ್ತಿ ಕಾಲುವೆ ಬಳಿ ತಾಯಿ ಎಸೆದು ಹೋಗಿದ್ದಾಳೆ.‌

ಶಿವಣ್ಣ ಪಡಶೆಟ್ಟಿ ಎಂಬುವವರು ಈ ಮಗುವನ್ನು ಮೊದಲು ನೋಡಿದ್ದಾರೆ. ಬಳಿಕ ‌ಪೊಲೀಸರಿಗೆ ಹಾಗೂ ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಯತ್ನಾಳ್- ಎಂ.ಪಿ.ರೇಣುಕಾಚಾರ್ಯ ದಿಢೀರ್​​ ಭೇಟಿ: ಒಂದೂವರೆ ಗಂಟೆಗೂ ಹೆಚ್ಚು ಕಾಲ ರಹಸ್ಯ ಮಾತುಕತೆ!

ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ತಾಳಿಕೋಟೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಗುವಿಗೆ ಚಿಕಿತ್ಸೆ ಕೊಡಿಸಿದ್ದಾರೆ. ಮಗುವಿನ ತಾಯಿ ಪತ್ತೆಗೆ ತಾಳಿಕೋಟೆ ಪೊಲೀಸರು ಮುಂದಾಗಿದ್ದಾರೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

Last Updated : Jan 20, 2022, 11:26 PM IST

ABOUT THE AUTHOR

...view details