ವಿಜಯಪುರ:ವಿವಾಹಿತ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹಿನ್ನೆಲೆ ಜ. 15ರಂದು ನಡೆದ ವ್ಯಕ್ತಿ ಕೊಲೆಗೆ ಸಂಬಂಧಿಸಿದಂತೆ ಮೂವರನ್ನು ಬಂಧಿಸುವಲ್ಲಿ ಮುದ್ದೇಬಿಹಾಳ ಪೊಲೀಸರು ಯಶಸ್ವಿಯಾಗಿದ್ದಾರೆ.
ಅಕ್ರಮ ಸಂಬಂಧ ಹಿನ್ನೆಲೆ ವ್ಯಕ್ತಿಯ ಕೊಲೆ ಪ್ರಕರಣ: ಮೂವರು ಆರೋಪಿಗಳ ಬಂಧನ - ವಿಜಯಪುರ ಕೊಲೆ ಪ್ರಕರಣ : ಮೂವರು ಆರೋಪಿಗಳ ಬಂಧನ
ಹೊಕ್ರಾಣಿ ಗ್ರಾಮದ ಗುರಪ್ಪ ಕರಕಪ್ಪ ಜಗಲಿಯನ್ನು ಕೊಲೆಗೈದಿದ್ದ ಮೂವರು ಆರೋಪಿಗಳನ್ನ ಮುದ್ದೇಬಿಹಾಳ ಪೊಲೀಸರು ಬಂಧಿಸಿದ್ದಾರೆ.
ಢವಳಗಿ ಗ್ರಾಮದ ತಾರನಾಳದ ಸೇತುವೆಯ ಕೆಳಗಡೆ ಶವ ಬಿಸಾಕಿ ಆರೋಪಿಗಳು ಪರಾರಿಯಾಗಿದ್ದರು. ಹೊಕ್ರಾಣಿ ಗ್ರಾಮದ ಗುರಪ್ಪ ಕರಕಪ್ಪ ಜಗಲಿಯನ್ನು ಕೊಲೆಗೈದಿದ್ದ ಮೂವರು ಆರೋಪಿಗಳನ್ನ ಇದೀಗ ಪೊಲೀಸರು ಬಂಧಿಸಿದ್ದಾರೆ.
ಹೊಕ್ರಾಣಿ ಗ್ರಾಮದ ರಹೆಮಾನ ಗುರಿಕಾರ, ಶರಣಪ್ಪ ಜಗಲಿ, ಬೀರಪ್ಪ ಮುರಾಳ ಬಂಧಿತ ಆರೋಪಿಗಳು. ಡಿವೈಎಸ್ಪಿ ಈ.ಶಾಂತವೀರ ಮಾರ್ಗದರ್ಶನದಲ್ಲಿ ಸಿಪಿಐ ಆನಂದ ವಾಗ್ಮೋಡೆ, ಪಿಎಸ್ಐ ಮಲ್ಲಪ್ಪ ಮಡ್ಡಿ, ಮುದ್ದೇಬಿಹಾಳ ಠಾಣೆಯ ಸಿಬ್ಬಂದಿ ಆರ್.ಎಸ್.ಪಾಟೀಲ, ಸಂಜಯ ಪಿ.ಜಾಧವ, ತಾಳಿಕೋಟಿ ಠಾಣೆಯ ಸಿಬ್ಬಂದಿ ಶಿವನಗೌಡ ಬಿರಾದಾರ, ಸಂಗಮೇಶ ಚಲವಾದಿ ನೇತೃತ್ವದಲ್ಲಿ ತಂಡ ರಚನೆ ಮಾಡಿ ಮೂವರು ಕೊಲೆಗಾರರನ್ನು ಬಂಧಿಸಲಾಗಿದೆ.