ವಿಜಯಪುರ : ಜುಲೈ 8ರಂದು ಬಹುತೇಕ ಕೇಂದ್ರ ಸಂಪುಟ ವಿಸ್ತರಣೆ ಹಿನ್ನೆಲೆಯಲ್ಲಿ ವಿಜಯಪುರ ಸಂಸದ ರಮೇಶ ಜಿಗಜಿಣಗಿಗೆ ಸಂಪುಟ ದರ್ಜೆ ಸಚಿವ ಸ್ಥಾನ ದೊರೆಯುವ ಸಾಧ್ಯತೆ ಇರುವ ಕಾರಣ ಏಕಾಏಕಿ ಜಿಗಜಿಣಗಿ ದೆಹಲಿಗೆ ಹಾರಲಿದ್ದಾರೆ.
ನನಗೂ ನಾಡಿದ್ದು ದೆಹಲಿಗೆ ಬರುವಂತೆ ಮೆಸೇಜ್ ಬಂದಿದೆ ಎಂದು ಮಾಧ್ಯಮದವರ ದೂರವಾಣಿ ಕರೆಗೆ ಪ್ರತಿಕ್ರಿಯೆ ನೀಡಿರುವ ಅವರು, ಕೇಂದ್ರದ ಹಿರಿಯ ನಾಯಕರಿಂದ ದೆಹಲಿಗೆ ಬರುವಂತೆ ಮೆಸೇಜ್ ಬಂದಿದೆ ಎಂದು ಹೇಳಿದ್ದಾರೆ.
ಬನ್ನಿ ಎಂದಿದ್ದಾರೆ, ಹೋಗುತ್ತೇನೆ : ಯಾವ ಕಾರಣಕ್ಕೆ ಬನ್ನಿ ಅಂತಾ ಅವರು ನನಗೇನೂ ತಿಳಿಸಿಲ್ಲ. ಆದರೆ, ನಾಡಿದ್ದು ಸಂಪುಟ ಪುನಾರಚನೆ ಇರುವ ಕಾರಣ ಭಾಗವಹಿಸಲು ಹೇಳಿರಬಹುದು. ಸಚಿವ ಸ್ಥಾನ ಕೊಡ್ತೀವಿ ಬನ್ನಿ ಅಂತಾನೂ ತಿಳಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 8ರಂದು ದೆಹಲಿಗೆ ಬನ್ನಿ ಎಂದಿದ್ದಾರೆ, ಹೋಗುತ್ತೇನೆ ಎಂದಿದ್ದಾರೆ.
ಓದಿ:223 ಕೋಟಿ ರೂ. ವೆಚ್ಚದಲ್ಲಿ ನಾಡಪ್ರಭು ಕೆಂಪೇಗೌಡರ 46 ಪಾರಂಪರಿಕ ತಾಣಗಳ ಅಭಿವೃದ್ಧಿ : ಸಿಎಂ ಬಿಎಸ್ವೈ