ವಿಜಯಪುರ: ನಗರದಲ್ಲಿರುವ ಶ್ರೀ ಗೌರಿ ಗಣೇಶ ಚಿಟ್ಸ್ ಪ್ರೈವೇಟ್ ಲಿಮಿಟೆಡ್ 50 ಕ್ಕೂ ಅಧಿಕ ಗ್ರಾಹಕರಿಗೆ ವಂಚನೆ ಮಾಡಿದೆ ಎಂದು ಚಿಟ್ಫಂಡ್ ಗ್ರಾಹಕರು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಜಯಪುರ: ಚಿಟ್ಫಂಡ್ ನಿಂದ 50 ಕ್ಕೂ ಅಧಿಕ ಗ್ರಾಹಕರಿಗೆ ಪಂಗನಾಮ ಆರೋಪ ಕಷ್ಟಕಾಲದಲ್ಲಿ ಸ್ವಲ್ಪ ಸಹಾಯವಾಗಬಹುದು ಎಂಬ ನಂಬಿಕೆಯಿಂದ ಉಳಿಸಿದ ಅಲ್ಪಸ್ವಲ್ಪ ಹಣವನ್ನು ಚೀಟಿ ಹಾಕಿದ್ದ ಗ್ರಾಹಕರಿಗೆ ಈ ಬೆಂಗಳೂರು ಮೂಲದ ಚಿಟ್ ಫಂಡ್ ಹೆಚ್ಚಿನ ಲಾಭಾಂಶ ನೀಡುತೇವೆ ಎಂದು ಹೇಳಿ ಮೋಸ ಮಾಡಿದೆಯಂತೆ. ಲಾಭ ನೀಡುವ ಆಸೆ ತೋರೊಸಿ ಸಣ್ಣ ವ್ಯಾಪಾರಿಗಳಿಂದ ಲಕ್ಷ ಲಕ್ಷ ಹಣ ಪಡೆದು ಕಳೆದ ಒಂದು ವರ್ಷದಿಂದ ಡಿಫಾಸಿಟ್ ಮಾಡಿದ ಹಣವನ್ನೂ ನೀಡದೆ ಸತಾಯಿಸುತ್ತಿದೆ ಎಂದು ಚಿಟ್ ಪಂಢ್ ಗ್ರಾಹಕರು ಆಡಳಿತ ಮಂಡಳಿ ವಿರುದ್ಧ ಕಿಡಿ ಕಾರುತ್ತಿದ್ದಾರೆ.
ಇನ್ನೂ 30 ಲಕ್ಷಕ್ಕೂ ಅಧಿಕ ಹಣವನ್ನ ಗೌರಿ ಗಣೇಶ ಚಿಟ್ ಫಂಡ್ ವಂಚನೆ ಮಾಡಿದ್ದು. ವಂಚನೆಗೆ ಒಳಗಾದವರ ಪೈಕಿ ಹೆಚ್ಚಾಗಿ 2018 ಮತ್ತು 2019 ಸಾಲಿನಲ್ಲಿ ಹಣ ತೊಡಗಿಸಿದವರಾಗಿದ್ದಾರೆ. ಲಾಭಾಂಶ ಎಂದು ಈಗಾಗಲೇ ನೀಡಿರುವ ಚಕ್‌ಗಳು ಬೌನ್ಸ್ ಆಗಿವೆ. 5 ಲಕ್ಷದವರೆಗೂ ಹೂಡಿಕೆ ಮಾಡಿ ಮೋಸಹೋಗಿರುವವರು ಒಂದೆಡೆಯಾದರೆ, ಚಿಟ್ ಪಂಡ್‌ನಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೂ ಕೂಡ ಕಳೆದ ಹಲವು ತಿಂಗಳಿಂದ ವೇತನ ನೀಡಿಲ್ಲ ಎಂದು ಹೇಳಲಾಗುತ್ತಿದೆ.
ಶ್ರೀ ಗೌರಿ ಗಣೇಶ ಚಿಟ್ಸ್ ಪ್ರೈವೇಟ್ ಲಿಮಿಟೆಡ್‌ಗೆ ಹಣ ತೊಡಗಿಸಿದ ಗ್ರಾಹಕರಿಗೆ ಚಳ್ಳೆ ಹಣ್ಣು ತಿನಿಸಲಾಗಿದೆ. ಹೀಗಾಗಿ ಕೂಡಲೆ ಬೆಂಗಳೂರಿನ ಚಿಟ್ಸ್ ಆಡಳಿತ ಮಂಡಳಿ ವಿರುದ್ಧ ಕ್ರಮ ಜರುಗಿಸಿ ಮೋಸಕ್ಕೊಳಗಾದ ಗ್ರಾಹಕರಿಗೆ ನ್ಯಾಯ ಒದಗಿಸುವಂತೆ ಜಿಲ್ಲಾಡಳಿತಕ್ಕೆ ಗ್ರಾಹಕರು ಮನವಿ ಮಾಡಿಕೊಳ್ಳುತ್ತಿದ್ದಾರೆ.