ವಿಜಯಪುರ: ಜಿಲ್ಲೆಯಲ್ಲಿ 6 ಕೊರೊನಾ ಪ್ರಕರಣಗಳು ದಾಖಲಾಗಿದ್ದರೂ ಸಹ ಬಿಜೆಪಿ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿಯವರು ಮಾತ್ರ ಇನ್ನೂ ಎಚ್ಚೆತ್ತುಕೊಂಡಿಲ್ಲ. ಲಾಕ್ಡೌನ್ ನಿಯಮ ಉಲ್ಲಂಘನೆ ಮತ್ತು ಅಂತರ ಕಾಯ್ದುಕೊಳ್ಳದೆ ಸಾಮೂಹಿಕವಾಗಿ ಅಂಬೇಡ್ಕರ್ ಜಯಂತಿ ಆಚರಿಸಿ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
ತಾವೇ ನಿಯಮ ಉಲ್ಲಂಘಿಸಿ, ಜನರಿಗೆ ಪಾಲಿಸಿ ಎಂದರೆ ಹೇಗೆ ಪಾಟೀಲ್ ನಡಹಳ್ಳಿಯವರೇ? - ಎಎಸ್ ಪಾಟೀಲ್ ನಡಹಳ್ಳಿ
ರಾಜ್ಯದಲ್ಲಿ ಕೊರೊನಾ ವ್ಯಾಪಕವಾಗಿ ಹರಡುತ್ತಿದೆ. ಇತ್ತ ವಿಜಯಪುರ ಜಿಲ್ಲೆಯಲ್ಲಿಯೂ ಸೋಂಕಿತ ಪ್ರಕರಣಗಳು ಹೆಚ್ಚುತ್ತಿವೆ. ಈ ಕುರಿತು ಮುಂಜಾಗೃತೆ ಕ್ರಮ ಕೈಗೊಳ್ಳಬೇಕಾದ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ ಮಾತ್ರ ಸಾಮೂಹಿಕವಾಗಿ ಅಂತರ ಕಾಪಾಡಿಕೊಳ್ಳದೆ ಡಾ. ಬಿ. ಆರ್. ಅಂಬೇಡ್ಕರ್ ಜಯಂತಿ ಆಚರಿಸಿ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಎ. ಎಸ್. ಪಾಟೀಲ್ ನಡಹಳ್ಳಿ
ಲಾಕ್ಡೌನ ನಿಯಮ ಉಲ್ಲಂಘನೆ ಮಾಡಿದ ಶಾಸಕ ಎ. ಎಸ್. ಪಾಟೀಲ್ ನಡಹಳ್ಳಿ
ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಮೂಹಿಕವಾಗಿ ಸಾಮಾಜಿಕ ಅಂತರ ಕಾಪಾಡದೇ ಎಲ್ಲರ ಮಧ್ಯೆ ನಿಂತು ಶಾಸಕರು ಭಾಷಣ ಮಾಡಿದ್ದಾರೆ. ಕೆಲವರು ಮಾಸ್ಕ್ ಕೂಡಾ ಧರಿಸದೆ ಉದಾಸೀನ ಪ್ರವೃತ್ತಿ ತೋರಿದ್ದಾರೆ.
ಈ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಜಿ. ಎಸ್. ಮಳಗಿ, ಇನ್ಸ್‌ಪೆಕ್ಟರ್ ಆನಂದ ವಾಗ್ಮೋರೆ, ಪುರಸಭೆ ಆಧಿಕಾರಿಗಳು, ಸದಸ್ಯರೂ ಸಹ ಭಾಗಿಯಾಗಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಬೇಜಾವಾಬ್ದಾರಿ ತೋರಿದ್ದಾರೆ.