ವಿಜಯಪುರ: ರಸ್ತೆ ಪಕ್ಕದಲ್ಲಿಯೇ ರಾಶಿ ರಾಶಿಯಾಗಿ ಬಿದ್ದ ಕಸವನ್ನು ಮಹಾನಗರ ಪಾಲಿಕೆ ತೆರವುಗೊಳಿಸದ ಕಾರಣ ವಿಜಯಪುರದ ಜನ ಈಗ ಮೂಗು ಮುಚ್ಚಿಕೊಂಡೇ ಹೊರಗೆ ಹೋಗಬೇಕಾದ ಸ್ಥಿತಿಯಿದೆ.
ಕಂಡೂ ಕಾಣದಂತೆ ವರ್ತಿಸುತ್ತಿದೆ ವಿಜಯಪುರ ಮಹಾನಗರ ಪಾಲಿಕೆ.. - ಜಿಲ್ಲಾಧಿಕಾರಿ ಕಚೇರಿಗೆ ಹೋಗುವ ರಸ್ತೆ ಪಕ್ಕದಲ್ಲಿಯೇ ಪ್ಲಾಸ್ಟಿಕ್ ಹಾಗೂ ಇತರ ತ್ಯಾಜ್ಯ
ರಸ್ತೆ ಪಕ್ಕದಲ್ಲಿಯೇ ರಾಶಿ ರಾಶಿ ಕಸ ಬಿದ್ದಿದೆ. ಮಹಾನಗರ ಪಾಲಿಕೆ ಇದೇ ಕಸವನ್ನ ನೋಡಿಯೂ ನೋಡದಂತಿದೆ..
ನಗರದ ಕೇಂದ್ರ ಬಸ್ ನಿಲ್ದಾಣ ಪಕ್ಕದ ಜಿಲ್ಲಾಧಿಕಾರಿ ಕಚೇರಿಗೆ ಹೋಗುವ ರಸ್ತೆ ಪಕ್ಕದಲ್ಲಿಯೇ ಪ್ಲಾಸ್ಟಿಕ್ ಹಾಗೂ ಇತರ ತ್ಯಾಜ್ಯ ಬಿದ್ದಿರುವುದನ್ನ ಮಹಾನಗರ ಪಾಲಿಕೆ ಅಧಿಕಾರಿಗಳು ಗಮನಿಸಿದ್ದರೂ ಸಹ ಕಸವನ್ನು ತೆಗೆಯುವ ಕಾರ್ಯಕ್ಕೆ ಮಾತ್ರ ಮುಂದಾಗುತ್ತಿಲ್ಲ.
ಕಸದ ರಾಶಿ ಬಿದ್ದಿರುವ ರಸ್ತೆಯ ಮುಂಭಾಗದಲ್ಲಿ ಅನೇಕ ಹೋಟೆಲ್‌ಗಳಿದ್ದು, ಪ್ರತಿದಿನ ನೂರಾರು ವಾಹನಗಳು, ಸಾರ್ವಜನಿಕರು ಸಂಚರಿಸುತ್ತಾರೆ. ಹಲವು ಬಾರಿ ಹೋಟೆಲ್ ಮಾಲೀಕರು ಸಹ ರಸ್ತೆಯಲ್ಲಿರುವ ಕಸವನ್ನು ವಿಲೇವಾರಿ ಮಾಡುವಂತೆ ಮಹಾನಗರ ಪಾಲಿಕೆ ಹಾಗೂ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಕಸದ ರಾಶಿ ಬಿದ್ದಿರುವ ಜಾಗದಲ್ಲಿ ಹಂದಿಗಳು ವಾಸ ಮಾಡುತ್ತಿದ್ದು, ದುರ್ವಾಸನೆಗೆ ರೋಗ ಹರಡುವ ಭೀತಿ ಎದುರಾಗಿದೆ.